
ಪ್ರಗತಿವಾಹಿನಿ ಸುದ್ದಿ: ಇಲ್ಲೊಬ್ಬ ಭೂಪ ಇಬ್ಬರೂ ಯುವತಿಯರನ್ನು ಒಂದೇ ಮಂಟಪದಲ್ಲಿ ಒಟ್ಟಿಗೆ ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿ ಮದುವೆಯಾಗಿರುವ ಘಟನೆ ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಲಿಂಗಾಪುರ ಮಂಡಲದ ಗುಮ್ಮೂರ್ ಗ್ರಾಮದ ಸೂರ್ಯದೇವ್ ಎಂಬುವವನು ಲಾಲ್ ದೇವಿ ಮತ್ತು ಜಲಕರ್ ದೇವಿ ಎಂಬ ಯುವತಿಯರನ್ನು ವಿವಾಹವಾಗಿದ್ದಾನೆ. ಈ ಇಬ್ಬರೂ ಯುವತಿಯರು ಬೇರೆ ಬೇರೆ ಗ್ರಾಮದವರು.
ಕಳೆದ ಮೂರು ವರ್ಷಗಳಿಂದ ಈ ಇಬ್ಬರನ್ನೂ ಪ್ರೀತಿ ಮಾಡುತ್ತಿದ್ದ ಸೂರ್ಯದೇವ್, ಇಬ್ಬರೂ ಪ್ರೇಯಸಿರನ್ನು ಒಪ್ಪಿಸಿ ಒಟ್ಟಿಗೆ ಮದುವೆಯಾಗಲು ನಿರ್ಧರಿಸಿದ್ದ.
ಆರಂಭದಲ್ಲಿ ಊರಿನವರು, ಮನೆಯವರು ಒಪ್ಪಿರಲಿಲ್ಲ. ಕೊನೆಗೂ ಎಲ್ಲರ ಮನವೊಲಿಸಿರುವ ಯುವಕ ಇಬ್ಬರನ್ನೂ ಮದುವೆಯಾಗಿದ್ದಾನೆ. ಮದುವೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.