Kannada News

ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾದುದು – ಜೀವನ ಖಟಾವ

ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾದುದು – ಜೀವನ ಖಟಾವ

ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾದುದು, ಜೊತೆಗೆ ನಿಸ್ವಾರ್ಥಸೇವೆ ಹಾಗೂ ಸ್ವಾವಲಂಬನೆ ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಳ್ಳಬೇಕು, ಪ್ರಮುಖ ಘಟ್ಟವಾದ ಈ ಸಮಯವನ್ನು ಸಧುಪಯೋಗ ಪಡಿಸಿಕೊಳ್ಳಬೇಕು – ಜೀವನ ಖಟಾವ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ವಿವಿಧ ಒಳ್ಳೆ ಗುಣಗಳನ್ನು ಅಂಗೀಕರಿಸಿ ಸರ್ವಾಂಗೀಣ ವಿಕಾಸ ಹೊಂದಲು ಪ್ರಯತ್ನಿಸಬೇಕು ಹಾಗೂ ನಿಸ್ವಾರ್ಥಸೇವೆ ಮತ್ತು ಸ್ವಾವಲಂಬನೆ, ಪ್ರಾಮಾಣಿಕತೆ, ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಬೆಳಗಾವಿಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜೀವನ ಖಟಾವ ರವರು ಉತ್ಕರ್ಷ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಧ್ಯೇಯವಾದಿ ಜೀವನ ಸಾಗಿಸಲು ಸಲಹೆ ನೀಡಿದರು. ಸಕಾರಾತ್ಮಕ ವಿಚಾರ, ಶಿಸ್ತುಬದ್ಧ ಜೀವನ, ಸಹನ ಶೀಲತೆ, ತಾಳ್ಮೆ, ಸಧೃಢತೆ, ನೈತಿಕತೆ ಹಾಗೂ ಸ್ವಜಾಗೃಕತೆ ಮುಂತಾದ ಹಲವಾರು ಒಳ್ಳೆ ಗುಣಗಳನ್ನು ಅಳವಡಿಸಲು ಅವರು ಸಲಹೆ ನೀಡಿದರು.

ಬೆಳಗಾವಿ ಶಿಕ್ಷಣ ಸಂಸ್ಥೆಯ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧುವಾರ ದಿ:೦೩ ಜುಲೈ ರಂದು ರೋಟರಿ ಕ್ಲಬ್ ನ ವತಿಯಿಂದ ಉತ್ಕರ್ಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜೀವನ ಖಟಾವ, ಕಾರ್ಯದರ್ಶಿಗಳಾದ ಪ್ರಮೋದ ಅಗರವಾಲ, ಆಯೋಜಕರಾದ ಲಕ್ಷ್ಮೀಕಾಂತ ನೇತಲಕರ ಹಾಗೂ ಯೂತ್ ಸರ್ವೀಸ್ ಡೈರೆಕ್ಟರಾದ ವಿಶಾಲ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ಶಾಲೆಯ ಮುಖ್ಯೋಪಾದ್ಯಾಯರಾದ ಎಮ್. ಕೆ. ಮಾದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು. ಕಾರ್ಯಕ್ರಮ ಯಶಸ್ವಿಗೋಳಿಸಲು ವಾಯ್. ಹೆಚ್. ಕಾಂಬಳೆ ಶ್ರಮಿಸಿದರು. ಕುಮಾರಿ ಪೂಜಾ ಗರಗ ನಿರೂಪಿಸಿ, ಕುಮಾರಿ ಕೀರ್ತಿ ಮಹೆಂದ್ರಕರ ಅತಿಥಿಗಳ ಪರಿಚಯಮಾಡಿ, ಕುಮಾರಿ ಪೂಜಾ ಹರಣಿ ಸ್ವಾಗತಿಸಿ, ಮತ್ತು ಕುಮಾರಿ ಅಂಜಲಿ ಹೆಬ್ಬಳ್ಳಿ ವಂದನಾರ್ಪಣೆ ವಂದಿಸಿದರು.////
Web Title : Student Life is Most Important – says Jeevana Khatawa – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button