Kannada NewsKarnataka NewsLatest

*ಕಳ್ಳತನ ಆರೋಪ; ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಕಳ್ಳತನ ಆರೋಪ ಮಾಡಿ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ್ದರಿಂದ ಮನನೊಂದ 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಗಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ದಿವ್ಯಾ ಬಾರಕೇರ ಆತ್ಮಹತ್ಯೆ ಮಾಡಿಕೊಂಡಿರುವ 8ನೇ ತರಗತಿ ವಿದ್ಯಾರ್ಥಿನಿ. ನಿನ್ನೆ ಶಾಲೆಯಿಂದ ಮನೆಗೆ ಬಂದ ವಿದ್ಯಾರ್ಥಿನಿ ನೇಣಿಗೆ ಕೊರಳೊಡ್ದಿದ್ದಾಳೆ.

ಬಾಗಲಕೋಟೆ ತಾಲೂಕಿನ ಕದಂಪುರ ಗ್ರಾಮದ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ಜಯಶ್ರೀ ಮಿಶ್ರೀಕೋಟಿ ತನ್ನ 2000 ರೂಪಾಯಿ ಕಾಣೆಯಾಗಿದೆ ಎಂದು ಹತ್ತನೆ ತರಗತಿಯ ನಾಲ್ವರು ವಿದ್ಯಾರ್ಥಿನಿಯನ್ನು ಹಾಗೂ 8ನೇ ತರಗತಿಯ ದಿವ್ಯಾಳನ್ನು ಕರೆದು ವಿಚಾರಿಸಿದ್ದರು. ಅಲ್ಲದೇ ದುವ್ಯಾಳ ಸಮವಸ್ತ್ರ ಬಿಚ್ಚಿಸಿ ಪರಿಶೀಲಿಸಿದ್ದರು. ಕಳ್ಳತನ ಮಾಡಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡುವಂತೆಯೂ ಹೇಳಿದ್ದರು. ಇದಕ್ಕೆ ಮುಖ್ಯಶಿಕ್ಷಕ ಕೆ.ಹೆಚ್.ಮುಜಾವರ ಹಾಗೂ ಇತರೆ ಶಿಕ್ಷಕರು ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿನಿಯ ಮೇಲೆ ಸಂಶಯ ಪಟ್ಟು ಶಿಕ್ಷಕ, ಶಿಕ್ಷಕಿಯರು ನಡೆದುಕೊಂಡ ರೀತಿಗೆ ನೊಂದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button