
ಪ್ರಗತಿವಾಹಿನಿ ಸುದ್ದಿ: ಹಾಸ್ಟೆಲ್ ನಲ್ಲಿ ಪಿಯುಸಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನಪ್ಪಿರುವ ಘಟನೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಡೆದಿದೆ.
ಸೀಮಾ ರಾಥೋಡ್ (17) ಎನ್ನುವ ಬಾಲಕಿಯ ಶವ ನಿನ್ನೆ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೇಣು ಬಿಗಿದಿರುವ ಸ್ಥಿತಿ ಕಂಡು ಇತರೆ ವಿದ್ಯಾರ್ಥಿನಿಯರು ಹೆದರಿ ಹಾಸ್ಟೆಲ್ ನಿಂದ ಕೂಡಲೇ ಹೊರಗಡೆ ಬಂದಿದ್ದಾರೆ.
ಪ್ರಥಮ ಪಿಯುಸಿ ಓದುತ್ತಿದ್ದ ಸೀಮಾ ಬಾಗಲಕೋಟೆಯ ವಾಗ್ದೇವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಸೇರಿದ ಹಾಸ್ಟೆಲ್ ನಲ್ಲಿಯೇ ಸೀಮಾ ಉಳಿದುಕೊಂಡಿದ್ದಳು.
ನಿನ್ನೆ ಸಂಜೆ ಸೀಮಾ ಪೋಷಕರಿಗೆ ಹಾಸ್ಟೆಲ್ ನಿಂದ ನಿಮ್ಮ ಮಗಳಿಗೆ ಪಿಟ್ಸ್ ಬಂದಿದೆ ಎಂದು ಪೋಷಕರಿಗೆ ಕರೆ ಹೋಗಿದೆ. ಈಗ ನೇಣು ಹಾಕಿಕೊಂಡಿದ್ದಾಳೆ ಅಂತಿದ್ದಾರೆ ಅಂತ ಪೋಷಕರು ಆರೋಪಿಸಿದ್ದಾರೆ.
ಹಾಗಾಗಿ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತವಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಪೋಷಕರು ಆಗ್ರಹಿಸಿದ್ದು, ನವನಗರ ಠಾಣೆ ಪೊಲೀಸರು ಹಾಸ್ಟಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.