
ಪ್ರಾಣ ಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಪ್ರಗತಿವಾಹಿನಿ ಸುದ್ದಿ, ಅಥಣಿ – ಕೃಷ್ಣಾ ನದಿ ಪ್ರವಾಹಕ್ಕೆ ವಿದ್ಯಾರ್ಥಿಗಳು ಕಂಗಾಲು.. ಪ್ರಾಣ ಭಯದಲ್ಲೆ ಶಿಕ್ಷಣ..! ಅಥಣಿ- ತಾಲೂಕಿನ ನದಿಇಂಗಳಗಾಂವ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಪ್ರಾಣ ಭಯದಲ್ಲೇ ಪಾಠ ಕಲಿಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ನೆರೆಯಲ್ಲಿ ಶಾಲೆ ಮುಳುಗಡೆಯಾಗಿ ೪ ಕೋಣೆಗಳ ಗೊಡೆಗಳು ನೆಲ ಸಮವಾಗಿದ್ದು, ೧೪೮ ವಿದ್ಯಾರ್ಥಿಗಳಿಗೆ ಶಿಥಿಲಗೊಂಡ ಕಟ್ಟಡದ ಆವರಣದಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಬಳಿ ಇರುವ ಪೇರಲ್ ತೋಟದ ನಮ್ಮೂರ ಸರಕಾರಿ ಪ್ರಾಥಮಿಕ ಶಾಲೆ ಸಂಪೂರ್ಣವಾಗಿ ಶಿಥಲಗೊಂಡಿದ್ದು, ಕಳೆದ ಒಂದು ತಿಂಗಳಿಂದ ಮಕ್ಕಳಿಗೆ ಬಯಲಲ್ಲೇ ಶಿಕ್ಷಣ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸಧ್ಯ ಮತ್ತೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ನದಿ ಪಾತ್ರದ ೧೨ ಕ್ಕೂ ಹೆಚ್ಚು ಶಾಲೆಗಳ ೧೮ ನೂರಕ್ಕೂ ಹೆಚ್ಚು ಮಕ್ಕಳು ಮತ್ತೆ ಶಿಕ್ಷಣದಿಂದ ವಂಚಿತವಾಗುವ ಸ್ಥಿತಿಗೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಅಥಣಿ ತಾಲೂಕಿನ ಹಲ್ಯಾಳ, ದರೂರು, ನದಿ ಇಂಗಳಗಾಂವ, ತೀರ್ಥ, ಸಪ್ತಸಾಗರ, ಶೇಗುಣಸಿ, ಅವರಖೋಡ, ದೊಡ್ಡವಾಡ, ಸತ್ತಿ, ಸವದಿ, ದರ್ಗಾ, ಜನವಾಡ ಗ್ರಾಮಗಳನ್ನು ಈಗಾಗಲೆ ಖಾಲಿ ಮಾಡುವಂತೆ ಜಿಲ್ಲಾಡಳಿತ ಆದೇಶ ಮಾಡಿದೆ.
ಆದರೆ ಇಲ್ಲಿರುವ ಪ್ರಾಥಮಿಕ ಮಾಧ್ಯಮಿಕ ಶಾಲೆಗಳನ್ನು ಸುರಕ್ಷತೆಯ ದೃಷ್ಟಿಯಿಂದ ಎತ್ತಂಗಡಿ ಮಾಡಿದೆ. ಇಲ್ಲಿರುವ ಮಕ್ಕಳನ್ನು ಕೇಳಿದರೆ ನಮಗೆ ಪಾಠ ಕೇಳಲು ಭಯವಾಗುತ್ತಿದೆ. ಯಾವಾಗ ಶಾಲೆಯ ಗೊಡೆಗಳು ನಮ್ಮ ಮೇಲೆ ಬೀಳುತ್ತವೆ ಎನ್ನುವ ಆತಂಕ ಕಾಡುತ್ತಿದೆ ಎನ್ನುತ್ತಿದ್ದಾರೆ. ಸರಕಾರ ಮಾತ್ರ ಮುಳುಗಡೆ ಪ್ರದೇಶದ ಶಾಲೆಗಳಿಗೆ ಪುರ್ನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದೆ ಮಾತ್ರ. ಇನ್ನೂ ಒಂದೆ ಒಂದು ಶಾಲೆಯ ದುರಸ್ಥಿ ಕಾರ್ಯವನ್ನು ಮಾಡಿಲ್ಲಾ ಎನ್ನುವ ಆರೋಪವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ. ಇನ್ನಾದ್ರು ಸರಕಾರ ಮತ್ತು ಶಿಕ್ಷಣ ಇಲಾಖೆ ತಕ್ಷಣವೇ ನದಿ ಪಾತ್ರದ ಎಲ್ಲ ಶಾಲೆಗಳ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಂಡು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿ ಕೊಡುತ್ತಾ ಕಾದು ನೋಡಬೇಕು?
೧೫ ದಿನಗಳ ಕಾಲ ನಮ್ಮ ಶಾಲೆ ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಿತ್ತು. ಈಗ ನಾವು ಶಾಲೆಗೆ ಬಂದು ನೋಡಿದಾಗ ಶಾಲೆಯ ಎಲ್ಲ ಕೋಣೆಗಳ ಗೊಡೆಗಳು ಬಿದ್ದು ಹೋಗಿವೆ. ಕೆಲವು ಗೊಡೆಗಳು ಬಿರುಕು ಬಿಟ್ಟಿವೆ, ಎಲ್ಲಾ ಪುಸ್ತಕಗಳು ಹಾಳ್ ಆಗಿದ್ದಾವ್. ನಮಗೆ ಪಾಠ ಕೇಳಲು ಆಗುತ್ತಿಲ್ಲಾ.. ಯಾವಾಗ ನಮ್ಮ ಮೇಲೆ ಗೊಡೆಗಳು ಬೀಳುತ್ತವೆ ಎನ್ನುವ ಭಯ ಕಾಡುತ್ತಿದೆ. ಸರಕಾರ ಅದಷ್ಟು ಬೇಗ ಶಾಲೆಯನ್ನು ದುರಸ್ಥಿ ಮಾಡಿ ಕೋಡಬೇಕು.. ಇಲ್ಲವೆ ಶೆಡ್ ಗಳನ್ನಾದ್ರು ನಿರ್ಮಾಣ ಮಾಡಿ ನಮ್ಮ ಶಿಕ್ಷಣಕ್ಕೆ ಅನುಕೂಲ ಮಾಡಿ ಕೊಡಬೇಕು.
– ವಿದ್ಯಾ, ವಿದ್ಯಾರ್ಥಿನಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ