Kannada NewsKarnataka News

ಬಿಜೆಪಿ ಹೈಕಮಾಂಡ್ ಕುತ್ತಿಗೆಗೆ ಪಾಶ ಹಾಕಿದ ರಮೇಶ ಜಾರಕಿಹೊಳಿ; ಟಿಕೆಟ್ ವಿಷಯದಲ್ಲಿ ಅವರ ಡಿಮ್ಯಾಂಡ್ ಏನು?

ಪ್ರಗತಿವಾಹಿನಿ ಸುದ್ದಿ, ವಿಜಯಪುರ: ನಾನಾ ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುವ ಶಾಸಕ ರಮೇಶ ಜಾರಕಿಹೊಳಿ ಇದೀಗ ಬಿಜೆಪಿ ಹೈಕಮಾಂಡ್ ಕುತ್ತಿಗೆಗೆ ಹೊಸ ಪಾಶ ಎಸೆದಿದ್ದಾರೆ.

ಈ ಹಿಂದೆ ನಡೆದಿದ್ದ ಆಪರೇಷನ್ ಕಮಲದಲ್ಲಿ ತಮ್ಮ ಪಾಳೇಯದಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಕಮಲ ಹಿಡಿದಿದ್ದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಏನಾದರೂ ಈ ಬಾರಿ ಟಿಕೆಟ್ ನೀಡಿಲ್ಲ ಎಂದರೆ ತಾವೂ ಗೋಕಾಕ್ ನಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ.

ವಿಜಯಪುರದಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರ ಈ ಹೇಳಿಕೆ ಅಥಣಿ ರಾಜಕಾರಣದಲ್ಲಿ ಹೊಸದೊಂದು ಬೆಳವಣಿಗೆಗೆ ಕಾರಣವಾಗಿದೆ. ಆಪರೇಷನ್ ಕಮಲದಲ್ಲಿ ಕುಮಠಳ್ಳಿ ಬಿಜೆಪಿಗೆ ಬರುತ್ತಿದ್ದಂತೆ ಈ ಹಿಂದಿನಿಂದ ಬಿಜೆಪಿಯಲ್ಲಿದ್ದ ಲಕ್ಷ್ಮಣ ಸವದಿ ಅವರ ಪಾಳೇಯದಲ್ಲಿ ಅಸಮಾಧಾನ ಉಕ್ಕಿತ್ತು. ಅವರನ್ನು ಸಮಾಧಾನಪಡಿಸಲು ಡಿಸಿಎಂ ಹುದ್ದೆ ನೀಡಲಾಗಿತ್ತು. ಆದರೂ ಒಳಬೇಗುದಿ ಮುಂದುವರಿದಿತ್ತು.

ಕೆಲವು ದಿನಗಳಿಂದ ಮಾಜಿ ಡಿಸಿಎಂ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹಾಗೂ ಮಹೇಶ ಕುಮಠಳ್ಳಿ ಅವರು ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಯಾರಿಗೆ ಟಿಕೆಟ್ ಸಿಕ್ಕಿದರೂ ಇಬ್ಬರೂ ಕೆಲಸ ಮಾಡುತ್ತೇವೆಂದು ಹೇಳಿಕೊಂಡಿದ್ದರು. ಈ ಮಧ್ಯೆ ಇಬ್ಬರೂ ತೆರೆಮರೆಯಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ -ಭಾಯ್-ಭಾಯ್ ಆಟದ ಮಧ್ಯೆ ಈಗ ಕುಮಠಳ್ಳಿ ಮೈದಾನದಾಚೆಯಿಂದ ಚೆಂಡು ಎಸೆದಿರುವ ರಮೇಶ ಜಾರಕಿಹೊಳಿ ಅವರ ಹೇಳಿಕೆ ಚುನಾವಣೆ ಹೊಸ್ತಿಲಲ್ಲಿ ಹೊಸ ರಾಜಕೀಯ ಬೆಳವಣಿಗೆಯೊಂದನ್ನು ಹುಟ್ಟುಹಾಕಿದೆ.

Home add -Advt
https://pragati.taskdun.com/accidental-fire-in-bus-live-combustion-of-conductor/
https://pragati.taskdun.com/at-the-origin-of-every-religion-lies-good-intention-cm-bommai/
https://pragati.taskdun.com/twin-fetuses-found-in-one-year-old-babys-brain/

Related Articles

Back to top button