
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ರಾಜ್ಯದ ಪ್ರವಾಸಿಗರ ಕುಟುಂಬಕ್ಕೆ ಕರ್ನಾಟಕ ಸರಕಾರ ಪರಿಹಾರ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಮೃತರಾದ ಇಬ್ಬರ ಕುಟುಂಬಕ್ಕೂ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್ ಮತ್ತು ಹಾವೇರಿ ಮೂಲದ ಭರತ್ ಭೂಷಣ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.
ಮೃತದೇಹಗಳನ್ನು ರಾಜ್ಯಕ್ಕೆ ತರಲು ಮತ್ತು ರಾಜ್ಯದ ಪ್ರವಾಸಿಗರನ್ನು ವಾಪಸ್ ಕರೆತರಲು ಸಚಿವ ಸಂತೋಷ ಲಾಡ್ ಅವರನ್ನು ಪಹಲ್ಗಾಮ್ ಗೆ ಕಳಿಸಿದ್ದಲ್ಲದೆ, ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದೆ.