Kannada NewsKarnataka NewsLatest

ಬಾಬುರಾವ್ ದೇಸಾಯಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವಹಿಂದೂ ಪರಿಷತ್ತಿನ ಹಿರಿಯ ಪ್ರಚಾರಕ ಬಾಬುರಾವ್ ದೇಸಾಯಿ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಮೂಲತಃ ಬೆಳಗಾವಿಯವರಾಗಿದ್ದ ದೇಸಾಯಿ, ಇಂದು ಮುಂಜಾನೆ ಬೆಂಗಳೂರಿನಲ್ಲಿ ಅವರು ನಿಧನರಾದರು. ವಿಶ್ವಹಿಂದೂ ಪರಿಷತ್ತಿನ ಕೇಂದ್ರೀಯ ಸಮಿತಿಯಲ್ಲಿ, ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದಲ್ಲಿ, ಎಮರ್ಜನ್ಸಿ ಸಂದರ್ಭದ ಹೋರಾಟಗಳಲ್ಲಿ ಅವರು ಸಕ್ರೀಯರಾಗಿ ಕೆಲಸ ಮಾಡಿದ್ದರು.

Home add -Advt

ಧರ್ಮಶ್ರೀಯಲ್ಲಿ ಅವರ ಅಂತಿಮ ದರ್ಶನದ ನಂತರ ಬೆಂಗಳೂರಿನಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ.

ಅತ್ಯಂತ ಸರಳ ವ್ಯಕ್ತಿಯಾಗಿದ್ದ ಬಾಬುರಾವ್ ದೇಸಾಯಿ ನಿಧನದಿಂದಾಗಿ ಬೆಳಗಾವಿಯ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಂತಾಗಿದೆ ಎಂದು ಆರ್ ಎಸ್ಎಸ್ ಪ್ರಮುಖ ರಾಘವೇಂದ್ರ ಕಾಗವಾಡ ಸ್ಮರಿಸಿದ್ದಾರೆ.

 

 

 

Related Articles

Back to top button