Belagavi NewsBelgaum NewsKannada NewsKarnataka NewsNationalPolitics

*ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸುಭಾಷ ಪಾಟೀಲ್ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಒಂದು ವರ್ಷದಿಂದ ಹಂಗಾಮಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಸುಭಾಷ್ ಪಾಟೀಲ್ ಅವರು ಅಧಿಕೃತವಾಗಿ ಬೆಳಗಾವಿ ಜಿಲ್ಲೆಯ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.‌

ಈ ಹಿಂದೆ ಸುಭಾಷ್ ಪಾಟೀಲ್ ಅವರು ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಒಂದು ವರ್ಷ ಬಿಜೆಪಿ ಕಾರ್ಯ ನಿರ್ವಹಿಸಿದ್ದು, ಮುಂದಿ ಮೂರು ವರ್ಷಗಳ ಅವಧಿಗೆ ಸುಭಾಷ ಪಾಟೀಲ್ ಅವರು ಅಧಿಕೃತವಾಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. 

Home add -Advt

ಇಂದು ನಗರದ ನಗರದ ಧರ್ಮನಾಥ ಭವನ ಹತ್ತಿರವಿರುವ ಬಿಜೆಪಿ ಕಚೇರಿಯಲ್ಲಿ  ಚುನಾವಣಾಧಿಕಾರಿಗಳು ಹಾಗೂ ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಅವರು ನೂತನ ಜಿಲ್ಲಾ ಅಧ್ಯಕ್ಷರ ಹೆಸರು ಘೋಷಣೆ ಮಾಡಿದ್ದರು. ನೂತನ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಅವರನ್ನು ಬಿಜೆಪಿ ಮುಖಂಡರು ಸನ್ಮಾನಿಸಿ ಶುಭ ಕೋರಿದರು.

ಈ ವೇಳೆ ಮಾಜಿ ಸಂಸದೆ ಮಂಗಳಾ ಅಂಗಡಿ, ಮಾಜಿ ಶಾಸಕರಾದ ಅರವಿಂದ ಪಾಟೀಲ್, ಡಾ‌. ವಿ ಐ ಪಾಟೀಲ್, ಜಿಲ್ಲಾ ಜನರಲ್ ಸೆಕ್ರೆಟ್ರಿ ಧನಶ್ರೀ ಸರದೇಸಯಿ ಸೇರಿದಂತೆ ಅನೇಕರು ಇದ್ದರು.

Related Articles

Back to top button