Belagavi NewsBelgaum NewsKannada NewsKarnataka NewsNational

*ಕುಂಭಮೇಳದಲ್ಲಿ ಬೆಳಗಾವಿ ಮೂಲದ ತಾಯಿ-ಮಗಳ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ‌ದಲ್ಲಿ ‌ಬೆಳಗಾವಿ ವಡಗಾವಿ ನಿವಾಸಿಗಳಿಬ್ಬರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. 

ಇಂದು ಬೆಳಗ್ಗೆ ನಡೆದ ಕಾಲ್ತುಳಿತದಲ್ಲಿ ಹಲವರು ಮಿಸ್ಸಿಂಗ್ ಆಗಿದ್ದು, ಈ ಘಟನೆಯಲ್ಲಿ ತಾಯಿ ಮಗಳು ಕಾಲ್ತುಳಿತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಯಾಗ್ ರಾಜನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ್‌ ಸಾವನ್ನಪ್ಪಿದ್ದಾರೆ. 

Home add -Advt

ಘಟನೆ ಬಳಿಕ ಬೆಳಗಾವಿಯಲ್ಲಿರುವ ಕುಟುಂಬಸ್ಥರಿಗೂ ತಾಯಿ ಮಗಳ ಸಂಪರ್ಕ ಸಿಗುತ್ತಿರಲಿಲ್ಲ.‌ ಫೋನ್‌ ರಿಂಗ್ ಆಗತಿದ್ದರೂ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಆತಂಕ ಸೃಷ್ಠಿಯಾಗಿತ್ತು ಆದರೆ ತಾಯಿ ಮಗಳು ಸಾವನ್ನಪ್ಪಿದ್ದಾರೆ ಎಂದು ಜ್ಯೋತಿ ಸಹೋದರ ಗುರುರಾಜ್ ಹುದ್ಧಾರ ಮಾಹಿತಿ ನೀಡಿದ್ದಾರೆ. ತಾಯಿ ಮಗಳು ಮೂರು ದಿನಗಳ ‌ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಸುಮಾರು 30 ಜನರ ತಂಡದಲ್ಲಿ ಪ್ರಯಾಣ ಬೆಳೆಸಿದರು.

Related Articles

Back to top button