![](https://pragativahini.com/wp-content/uploads/2025/02/IMG_20250214_191322_650_x_350_pixel.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಬ್ಬಿನ ಗದ್ದೆಗೆ ಹೊತ್ತಿದ ಬೆಂಕಿ ಆರಿಸಲು ಯತ್ನಿಸಿದ ವೃದ್ಧ ರೈತ ಬೆಂಕಿಯ ಕೆನ್ನಾಲೆಗೆ ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಾರಲಗಾ ಗ್ರಾಮದಲ್ಲಿ ನಡೆದಿದೆ.
ಈ ಘಟನೆಯಲ್ಲಿ 65 ವರ್ಷದ ರೈತ ತುಕಾರಾಮ ಪವಾರ ಮೃತಪಟ್ಟಿದ್ದಾರೆ. ಕಾರಲಗಾ – ಚಾಪಗಾಂವ ರಸ್ತೆಯ ಬದಿ ತುಕಾರಾಮಗೆ ಸೇರಿದ ಗದ್ದೆಯಿತ್ತು. ಕಟಾವು ಮಾಡಿದ ಕಬ್ಬು ನಾಟಿ ಮಾಡಲೆಂದು ಸಂಗ್ರಹಿಸಿಡಲಾಗಿತ್ತು. ಈ ವೇಳೆ ಕಬ್ಬಿನ ಗದ್ದೆಯಲ್ಲಿ ಆಕಸ್ಮಿಕವಾಗಿ ಹೊತ್ತಿದ ಬೆಂಕಿ ನಂದಿಸಲು ಯತ್ನಿಸಿದ್ದಾಗ ಈ ಘಟನೆ ಸಂಭವಿಸಿದೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ