Film & EntertainmentKannada NewsKarnataka NewsLatestPolitics

*ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಬರಲ್ಲ: ಸುಮಲತಾ ಅಂಬರೀಶ್*

ಪ್ರಗತಿವಾಹಿನಿ ಸುದ್ದಿ: ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ಮುಂದುವರಿಯಲಿದ್ದು, ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.

Related Articles

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಬಿಜೆಪಿ ಸೇರಿದ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ ಅವರು, ಅಭಿಷೇಕ್ ಅಂಬರೀಶ್ ಸದ್ಯಕ್ಕೆ ರಾಜಕಾರಣಕ್ಕೆ ಬರಲ್ಲ. ಸಿನಿಮಾದಲ್ಲಿ ಮಾತ್ರ ಇರ್ತಾರೆ. ಇನ್ನು ನಟ ದರ್ಶನ್, ಯಶ್ ಬೆಂಬಲ ಸದ್ಯಕ್ಕೆ ಅಪ್ರಸ್ತುತ. ಮೊನ್ನೆ ನಡೆದ ಸಭೆಯಲ್ಲಿ ದರ್ಶನ್ ಬಂದಿದ್ದರು. ಅವರಿಗೆ ಪಕ್ಷ ಅಲ್ಲ, ನನ್ನ ನಿರ್ಧಾರ ಮುಖ್ಯ ಅಂತ ಹೇಳಿದ್ದಾರೆ ಎಂದರು.

ನಾನು‌ ಬಿಜೆಪಿಯಿಂದ ಮೋಸ ಹೋಗಿಲ್ಲ, ಮೋಸ ಹೋಗುತ್ತೇನೆ ಅಂದಿದ್ದರೆ ಅದೇ ಪಕ್ಷವನ್ನು ಯಾಕೆ ಸೇರ್ತಿದ್ದೆ? ಬಿಜೆಪಿಗೆ ಸಂಪೂರ್ಣ ಮನಸ್ಸಿಂದ, ಸಂತೋಷದಿಂದ ಸೇರಿದ್ದೇನೆ. ಈಗ ಮೊದಲ ಹೆಜ್ಜೆ ಹಾಕಿದ್ದೇನೆ. ಮುಂದೆ ವರಿಷ್ಠರು, ನಾಯಕರ ಜತೆ ಚರ್ಚಿಸಿ, ಸಲಹೆ ಪಡೆದು ಮುಂದುವರೆಯುತ್ತೇನೆ. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ, ನನಗೆ ಯಾವ ಪಾತ್ರ ಕೊಟ್ಟಿದ್ದಾರೆ, ಕೊಡ್ತಾರೆ ಅನ್ನೋ ಪ್ರಶ್ನೆ ಬರಲ್ಲ. ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ಬದ್ಧ ಎಂದು ತಿಳಿಸಿದರು.

Home add -Advt

Related Articles

Back to top button