Latest

ಮುಳುಗಿದ ಅರೆಬಿಯನ್ ಹಡಗು;  ಭಾರತ, ಪಾಕಿಸ್ತಾನ ಸೇರಿ ಹಲವು ದೇಶದ 30 ಸಿಬ್ಬಂದಿಯಿದ್ದ ಹಡಗು ; ಇಲ್ಲಿದೆ ದುರ್ಘಟನೆ ಕಾರಣ

ಪ್ರಗತಿವಾಹಿನಿ; ದುಬೈ – 
ಅರೇಬಿಯನ್‌ ಹಡಗೊಂದು ಇರಾನ್‌ ಅಸ್ಸಾಲುಯೆ ಬಂದರಿನ ಬಳಿ ಗುರುವಾರ ಮುಳುಗಿದೆ. ಈ ಹಡಗಿನಲ್ಲಿ ಭಾರತ, ಪಾಕಿಸ್ತಾನ ಸೇರಿ ಹಲವು ದೇಶದ 30 ಸಿಬ್ಬಂದಿಯಿದ್ದರು.
ಹವಾಮಾನ ಏರುಪೇರಿನಿಂದಾಗಿ ಸಮುದ್ರದಲ್ಲಿ ಅತಿಯಾಗಿ ಗಾಳಿ ಬೀಸಿರುವುದರಿಂದ ಅಲ್‌ ಸಾಲ್ಮಿ’ ಎಂಬ ಹಡಗು ನೀರುಪಾಲಾಗಿದೆ. ಅಸ್ಸಾಲುಯೆ ಬಂದರಿನಿಂದ ಕೇವಲ 50 ಕಿ.ಮೀ ಅಂತರದಲ್ಲೇ ಈ ಘಟನೆ ನಡೆದಿದೆ.ಹಡಗು ಇರಾಕ್‌ನ ಉಮ್‌ ಕಸ್ರ್ಗೆ ಕಾರು ಮತ್ತು ಇತರೆ ಸಾಮಾಗ್ರಿಗಳನ್ನು ಹೊತ್ತೂಯ್ಯುತ್ತಿತ್ತು.
ಹಡಗಿನಲ್ಲಿದ್ದ 16 ಮಂದಿಯನ್ನು ರಕ್ಷಿಸಲಾಗಿದೆ. 11 ಮಂದಿಗೆ ಲೈಫ್ ಜಾಕೆಟ್‌ ನೀಡಲಾಗಿತ್ತು. ಒಬ್ಬ ಸಿಬ್ಬಂದಿಯನ್ನು ಹತ್ತಿರದ ಟ್ಯಾಂಕರ್‌ನವರು ರಕ್ಷಿಸಿದ್ದಾರೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button