Kannada NewsKarnataka NewsLatest

ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಿಯಲ್ ಎಸ್ಟೇಟ್ ಎತ್ತಿ ಹಿಡಿಯಿರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶದ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಕ ಪಾತ್ರ ವಹಿಸುವ ರಿಯಲ್ ಎಸ್ಟೇಟ್ ಉಳಿಸಲು ಕೇಂದ್ರ ಸರಕಾರ ನೆರವಾಗಬೇಕು ಎಂದು ಕೋರಿ ಕ್ರೆಡೈ ಸಂಸ್ಥೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದೆ.

ದೇಶವ್ಯಾಪಿ ಸ್ಥಳೀಯ ಶಾಖೆಗಳಿಂದ ಜನಪ್ರತಿನಿಧಿಗಳ ಮೂಲ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಬೆಳಗಾವಿಯಲ್ಲಿ ಕ್ರೆಡೈ ಅಧ್ಯಕ್ಷ ರಾಜೇಶ ಹೆಡಾ ನೇತೃತ್ವದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ದೇಶದ ಸುಮಾರು 250 ಉದ್ಯಮಗಳು ನೇರವಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಅವಲಂಭಿಸಿವೆ. 52 ಮಿಲಿಯನ್ ಜನರು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದ ಜಿಡಿಪಿ ಏರಿಕೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹಾಗಾಗಿ ಈಗಿನ ಸಂದಿಗ್ದ ಪರಿಸ್ಥಿತಿಯಲ್ಲಿ ಉದ್ಯಮವನ್ನು ಎತ್ತಿ ಹಿಡಿಯಲು ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂದು ಕೋರಲಾಗಿದೆ.

ಮನೆಗಳನ್ನು ಕೊಳ್ಳುವ ಗ್ರಾಹಕರಿಗೂ ಮನೆ ಸಾಲದ ಮೇಲಿನ ಬಡ್ಡಿ ಇಳಿಸುವ ಮೂಲಕ ನೆರವಾಗಬೇಕು. ಇದರಿಂದ ಉದ್ಯಮ ಮತ್ತೆ ಏಳಲು ಸಹಾಯವಾಗುತ್ತದೆ ಎನ್ನುವುದು ಸೇರಿದಂತೆ ಹಲವಾರು ಮಹತ್ವದ ಅಂಶಗಳ ಕಡೆಗೆ ಕ್ರೆಡೈ ಕೇಂದ್ರದ ಗಮನ ಸೆಳೆದಿದೆ.

ಕಾರ್ಯದರ್ಶಿ ವಿಜಯ ಭಂಡಾರಿ, ಕೋಶಾಧ್ಯಕ್ಷ ದೀಪಕ್ ಗೋಜಗೆಕರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button