Kannada NewsLatest

ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕ ಬಜೆಟ್ ; ಡಾ. ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ 2023ರ ಬಜೆಟ್ ಜನಪರ ಹಾಗೂ ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದ್ದು ಸ್ವಾಗತಾರ್ಹವಾಗಿದೆ ಎಂದು ಬಿಜೆಪಿ ಧುರೀಣೆ ಡಾ. ಸೋನಾಲಿ ಸರ್ನೋಬತ್ ಹೇಳಿದ್ದಾರೆ.

ಬಡ ಮಧ್ಯಮ ವರ್ಗದವರು, ಮಹಿಳೆಯರು, ಹಾಗೂ ಪರಿಶಿಷ್ಟ ಸಮುದಾಯದವರಿಗೆ ಈ ಬಜೆಟ್ ನಿಂದಾಗಿ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಪ್ರಾಚೀನ ಲಿಪಿಗಳ ಡಿಜಿಟಲೀಕರಣಕ್ಕಾಗಿ ಭಾರತ್ ಶ್ರೀ ಸ್ವಾಗತಾರ್ಹ ಹೆಜ್ಜೆಯಾಗಿದೆ.
ಏಕಲವ್ಯ ಶೈಲಿಯ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರ ನೇಮಕ, ದೂರದ ಸ್ಥಳಗಳನ್ನು ತಲುಪಲು ಕುಡಿಯುವ ನೀರು ಪ್ರಸ್ತುತದ ಅತ್ಯಗತ್ಯ ಪೂರೈಸಿದೆ.
ಇನ್ನಷ್ಟು ಉಜ್ವಲ ಅನಿಲದ ಸಂಪರ್ಕಗಳು ಬಡ ಮಹಿಳೆಯರ ಪಾಲಿಗೆ ವರದಾನವಾಗಲಿದೆ ಎಂದು ಡಾ.ಸೋನಾಲಿ ತಿಳಿಸಿದ್ದಾರೆ.

ಆರೋಗ್ಯ ಸೇವೆಗಳಲ್ಲಿ ಅರೆವೈದ್ಯರ ಕೊರತೆ ತುಂಬಲು ನರ್ಸಿಂಗ್ ಕಾಲೇಜುಗಳನ್ನು ಸಂಯೋಜಿಸುತ್ತಿರುವುದು, ಉದ್ಯೋಗ ಸೃಷ್ಟಿ ಮತ್ತು ಪೂರಕ ವ್ಯಾಪಾರ ಪರಿಸರ ನಿರ್ಮಾಣ, ಹಸಿರು ಬೆಳವಣಿಗೆ  ಮೂಲಸೌಕರ್ಯ ಯೋಜನೆಗಳು 5 ಟ್ರಿಲಿಯನ್ ಆರ್ಥಿಕತೆಯತ್ತ ಒಂದು ಹೆಜ್ಜೆ ಶ್ಲಾಘನೀಯ ನಿರ್ಣಯ ಎಂದು ಡಾ. ಸೋನಾಲಿ ಹೇಳಿದ್ದಾರೆ.

ರಸ್ತೆ, ಹೆದ್ದಾರಿ, ಸಾರಿಗೆ ಸಂಪರ್ಕ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ 2.70 ಲಕ್ಷ ಕೋಟಿ ರೂ. ಗಳ ಬೃಹತ್ ಪ್ರಮಾಣದ ಅನುದಾನ ಘೋಷಿಸಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಯ ಆಶಾದಾಯಕ ಹೆಜ್ಜೆಯಾಗಿದೆ.  ಬರಪೀಡಿತ ಪ್ರದೇಶಗಳಿಗೆ ನೆರವಿನ ಘೋಷಣೆ ಮತ್ತು ಮತ್ಸ್ಯ ಸಂಪದ ಯೋಜನೆಗೆ ಹೆಚ್ಚಿನ ಅನುದಾನ ಘೋಷಿಸುವ ಮೂಲಕ ಏಕಕಾಲಕ್ಕೆ ರೈತರು ಹಾಗೂ ಮೀನುಗಾರರಿಗೆ ಅನುಕೂಲ ಕಲ್ಪಿಸುವ ಜಾಣ್ಮೆ ಈ ಬಜೆಟ್ ನಲ್ಲಿ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಯೋಗ್ಯಾಸ್, ಸಹಜ ಕೃಷಿ, ಅಮೃತ ಸರೋವರ್ ಇತ್ಯಾದಿ ಯೋಜನೆಗಳಿಗೆ ಬಜೆಟ್ ನಲ್ಲಿ ಆದ್ಯತೆ ನೀಡಿರುವುದರಿಂದ  ರಾಜ್ಯದ ರೈತರಿಗೂ ಇದರ ಲಾಭ ನಿಶ್ಚಿತವಾಗಿ ದೊರೆಯಲಿದೆ.

ಎಲ್ಲದಕ್ಕೂ ಮುಖ್ಯವಾಗಿ ಆದಾಯ ತೆರಿಗೆ ರಿಯಾಯಿತಿ ಪ್ರಮಾಣ 7ಲಕ್ಷಕ್ಕೆ ಏರಿಸಿರುವುದರಿಂದ ಎಲ್ಲ ವರ್ಗದ ಜನರಿಗೂ ಹೆಚ್ಚಿನ ಉಳಿತಾಯವಾಗಲಿದೆ.
ಹಿರಿಯ ನಾಗರಿಕರಿಗೆ ಮತ್ತಷ್ಟು ಪ್ರೋತ್ಸಾಹಕರ ಯೋಜನೆಗಳನ್ನು ಘೋಷಿಸಿದ್ದು, ಬ್ಯಾಂಕ್ ವ್ಯವಸ್ಥೆಯ ಉನ್ನತೀಕರಣದ ಜೊತೆಗೆ ಠೇವಣಿದಾರರ ಹಿತ ರಕ್ಷಣೆಗೂ ವಿಶೇಷ ಆದ್ಯತೆ ನೀಡಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಭಿವೃದ್ಧಿಯತ್ತ ಭಾರತದ ದಾಪುಗಾಲನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ಡಾ. ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.

ರಮೇಶ ಜಾರಕಿಹೊಳಿ ಆರೋಪಗಳಿಗೆ ಡಿ.ಕೆ.ಶಿವಕುಮಾರ ಮೊದಲ ಪ್ರತಿಕ್ರಿಯೆ

https://pragati.taskdun.com/dk-shivakumars-reaction-to-ramesh-jarakiholis-allegation/

*ನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ತಲೆ ಬಾಗಬೇಕು: ಸಿಎಂ ಬೊಮ್ಮಾಯಿ*

https://pragati.taskdun.com/mukteshwara-templeinaugurationcm-basavaraj-bommai/

ಸಾಕ್ಷಿಗಳ ಸಾಕ್ಷ್ಯ ಇಂಗ್ಲಿಷ್‌ನಲ್ಲಷ್ಟೇ ದಾಖಲಿಸಲು ಅವಕಾಶವಿಲ್ಲ; ಸುಪ್ರೀಂ

https://pragati.taskdun.com/evidence-of-witnesses-is-not-allowed-to-be-recorded-in-english-only-supreme/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button