Kannada NewsLatestNational

*ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಶೂ ಎಸೆದ ವಕೀಲ*

ಪ್ರಗತಿವಾಹಿನಿ ಸುದ್ದಿ: ಸುಪ್ರೀಂ ಕೋರ್ಟ್ ನಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದಿರುವ ಘಟನೆ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದೆ.

ಪ್ರಕರಣವೊಂದರ ಅರ್ಜಿ ವಿಚಾರಣೆಯ ವೇಳೆ ಆಕ್ರೋಶಗೊಂಡ ವಕೀಲನೊಬ್ಬ ಈ ಕೃತ್ಯವೆಸಗಿದ್ದಾನೆ. ಭಗವಾನ್ ವಿಷ್ಣುವಿನ ಕುರಿತಾಗಿ ಬಿ.ಆರ್.ಗವಾಯಿ ಈ ಹಿಂದೆ ವಿಚಾರಣೆ ವೇಳೆ ಅವಮಾನ ಮಾಡಿದ್ದಾರೆ. ಇದು ಸನಾತನ ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನವಾಗಿದ್ದು, ಸನಾತನ ಧರ್ಮಕ್ಕೆ ಅವಮಾನ ಮಾಡುವುದನ್ನು ಸಹಿಸುವುದಿಲ್ಲ ಎಂದು ವಕೀಲ ಕಿಡಿಕಾರಿದ್ದಾರೆ.

ಇದೇ ವೇಳೆ ಏಕಾಏಕಿ ತನ್ನ ಶೂ ತೆಗೆದುಕೊಂಡಿದ್ದು ಎಸೆಯಲು ಯತ್ನಿಸಿದ್ದಾರೆ. ಈ ವೇಳೆ ಇತರ ವಕೀಲರು ತಡೆಯಲು ಮುಂದಾದರೂ ವಕೀಲ ಸಿಜೆಐ ಬಿ.ಆರ್.ಗವಾಯಿ ಅವರತ್ತ ಶೂ ಎಸೆದಿದ್ದಾನೆ ಎಂದು ತಿಳಿದುಬಂದಿದೆ. ಆದರೆ ವಿಚಲಿತರಾಗದ ಮುಖ್ಯನ್ಯಾಯಮೂರ್ತಿಗಳು ನಾನು ಭಗವಾನ್ ವಿಷ್ಣುಗೆ ಅವಮಾನ ಮಾಡಿಲ್ಲ, ಸನಾತನ ಧರ್ಮಕ್ಕೆ ಯಾವುದೇ ಅಪಮಾನ ಮಾಡಿಲ್ಲ ಎಂದು ತಿಳಿಸಿದ್ದಾರೆ.

ತಕ್ಷಣ ಇತರ ವಕೀಲರು ಶೂ ಎಸೆದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಶೀ ಎಸೆದ ವಕೀಲನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Home add -Advt

Related Articles

Back to top button