Kannada NewsKarnataka NewsLatest

ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ – ಪ್ರಗತಿ ಮೀಡಿಯಾ ಹೌಸ್ ಉದ್ಘಾಟಿಸಿದ್ದ ಅಂಗಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪ್ರಗತಿವಾಹಿನಿಯ ಮಾತೃಸಂಸ್ಥೆ ಪ್ರಗತಿ ಮೀಡಿಯಾ ಹೌಸ್ ನ್ನು ಮೇ 7, 2019 ರಂದು ಸಂಸದ (ಆಗ ಇನ್ನೂ ಸಚಿವರಾಗಿರಲಿಲ್ಲ) ಸುರೇಶ ಅಂಗಡಿ ಉದ್ಘಾಟಿಸಿದ್ದರು.

ಪ್ರಗತಿವಾಹಿನಿ ಕುರಿತು ಅಪಾರ ಪ್ರೀತಿ ಹೊಂದಿದ್ದ ಸುರೇಶ ಅಂಗಡಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು.

ಹಾಗೆಯೇ ಪ್ರಗತಿ ಮೀಡಿಯಾ ಹೌಸ್ ನಾಡಿನ ಜನತೆಗೆ ಒಂದೇ ಸ್ಥಳದಲ್ಲಿ ಎಲ್ಲ ರೀತಿಯ ಮಾಧ್ಯಮ ಸೇವೆ ನೀಡುವ ಯೋಜನೆ ಕುರಿತು ಮಾಹಿತಿ ಪಡೆದು, ಶುಭ ಕೋರಿದ್ದರು. ಪ್ರಗತಿವಾಹಿನಿ ಮತ್ತು ಪ್ರಗತಿ ಮೀಡಿಯಾ ಹೌಸ್ ಮುಖ್ಯಸ್ಥ ಎಂ.ಕೆ.ಹೆಗಡೆಯವರ ಕುರಿತು ಅಪಾರ ಪ್ರೀತಿ ಹೊಂದಿದ್ದ ಸುರೇಶ ಅಂಗಡಿ, ಸುಮಾರು 20 ವರ್ಷದಿಂದ ಇರುವ ಸಂಬಂಧವನ್ನು ಮೆಲುಕು ಹಾಕಿದ್ದರು.

ಮಾಧ್ಯಮಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಕುರಿತು ತಾವು ಚರ್ಚಿಸುತ್ತಿದ್ದ, ಮಾಹಿತಿ ಪಡೆಯುತ್ತಿದ್ದುದನ್ನು ಪ್ರಸ್ತಾಪಿಸಿದ್ದರು.

ಪ್ರಗತಿವಾಹಿನಿಯ ವಾರ್ಷಿಕೋತ್ಸವದ ಸಂದರ್ಭದಲ್ಲೂ ಶುಭ ಹಾರೈಸಿ ವಾಹಿನಿ ರಾಜ್ಯಕ್ಕೆ ನಂಬರ್ 1 ಆಗಲಿ ಎಂದು ಹಾರೈಸಿದ್ದರು.

ಸುರೇಶ ಅಂಗಡಿಯವರ ಅಕಾಲಿಕ ನಿಧನಕ್ಕೆ ಪ್ರಗತಿ ಮೀಡಿಯಾ ಹೌಸ್ ಮತ್ತು ಪ್ರಗತಿವಾಹಿನಿ ತೀವ್ರ ಶೋಕ ವ್ಯಕ್ತಪಡಿಸಿದೆ.

ಸುರೇಶ ಅಂಗಡಿ ಹೆಸರಿಡಲಿ

ಬೆಂಗಳೂರು -ಬೆಳಗಾವಿ ಮಧ್ಯೆ ಓಡಾಡಲು ಸರಿಯಾದ ಸಮಯಕ್ಕೆ ರೈಲ್ವೆ ವ್ಯವಸ್ಥೆ ಇರಲಿಲ್ಲ. ರಾಣಿ ಚನ್ನಮ್ಮ ರೈಲಿನ ಸಮಯವನ್ನು ಬದಲಿಸಿ ಬೆಳಗಾವಿಗರಿಗೆ ಅನುಕೂಲ ಮಾಡಿಕೊಡಬೇಕೆನ್ನುವ ಕೂಗು ಹಲವಾರು ವರ್ಷಗಳಿಂದ ಇತ್ತು. ಆದರೆ ಅದು ಕೇವಲ ಅರಣ್ಯ ರೋಧನವಾಗಿತ್ತು.

ಆದರೆ ಸುರೇಶ ಅಂಗಡಿ ಕೇಂದ್ರ ರೈಲ್ವೆೆ ಖಾತಿ ಸಚಿವರಾದ ವಾರದಲ್ಲೇ ಬೆಂಗಳೂರು – ಬೆಳಗಾವಿ ವಿಶೇಷ ರೈಲಿನ ಘೋಷಣೆ ಮಾಡಿದರು. ಅಷ್ಟೇ ಅಲ್ಲ, ತಿಂಗಳೊಳಗೆ ಆರಂಭವನ್ನೂ ಮಾಡಿದರು. ಇದು ಅವರ ದಿಟ್ಟತನಕ್ಕೆ ಉದಾಹರಣೆಯಾಗಿದೆ.

ಈಗ ಈ ರೈಲು ಬೆಳಗಾವಿಗರಿಗೆ ಅತ್ಯಂತ ಅನುಕೂಲವಾಗಿದ್ದು, ಅತ್ಯಂತ ಯಶಸ್ವಿಯಾಗಿ ಓಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ರೈಲಿಗೆ ಸುರೇಶ ಅಂಗಡಿ ಎಕ್ಸಪ್ರೆಸ್ ಎಂದು ನಾಮಕರಣ ಮಾಡಬೇಕು ಎಂದು ಪ್ರಗತಿವಾಹಿನಿ ಹಕ್ಕೊತ್ತಾಯ ಮಾಡುತ್ತದೆ.

ಕೇಂದ್ರ ಸರಕಾರ ಕೂಡಲೇ ಈ ಕುರಿತು ಘೋಷಣೆ ಮಾಡಬೇಕು. ಕನ್ನಡ ಸಂಘಟನೆಗಳು ಹಾಗೂ ಬೆಳಗಾವಿಯ ಎಲ್ಲ ಸಂಘಟನೆಗಳೂ ಈ ಬಗ್ಗೆ ಕೂಗೆಬ್ಬಿಸಬೇಕು ಎಂದು ಪ್ರಗತಿವಾಹಿನಿ ಕೋರುತ್ತದೆ

ಇದರ ಜೊತೆಗೆ ಬೆಳಗಾವಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದಾರೆ. ಬೆಳಗಾವಿ  -ಧಾರವಾಡ ರೈಲಿನ ಹಲವು ದಶಕಗಳ ಕೂಗಿಗೆ ಸ್ಪಂದಿಸಿ, ಮಂಜೂರು ಮಾಡಿಸಿದ್ದಾರೆ. ಉತ್ತರ ಕರ್ನಾಟಕಕ್ಕೆ, ಕರ್ನಾಟಕ ರಾಜ್ಯಕ್ಕೂ ರೈಲ್ವೆ ಇಲಾಖೆಯಿಂದ ಹಲವಾರು ಸೌಲಭ್ಯಗಳನ್ನು ಒದಗಿಸಲು ಅವರು ಕ್ರಮ ತೆಗೆದುಕೊಂಡಿದ್ದಾರೆ. ಬಜೆಟ್ ನಲ್ಲೂ ಅತಿ ಹೆಚ್ಚು ಹಣ ಒದಗಿಸಿ ಇತಿಹಾಸ ನಿರ್ಮಿಸಿದ್ದರು.

(ನಿಮ್ಮ ಅಭಿಪ್ರಾಯಗಳನ್ನು ಇ ಮೇಲ್ ಮಾಡಿ  – [email protected] )

ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ

ಬೆಳಗಾವಿ-ಬೆಂಗಳೂರು ತತ್ಕಾಲ್ ಎಕ್ಸಪ್ರೆಸ್: 29ರಂದು ಅಂಗಡಿಯಿಂದ ಹಸಿರು ನಿಶಾನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button