Kannada NewsKarnataka NewsLatest

ಬೆಳಗಾವಿ-ಬೆಂಗಳೂರು ತತ್ಕಾಲ್: ಸುರೇಶ ಅಂಗಡಿ ಟ್ವೀಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಣಿ ಚನ್ನಮ್ಮ ಎಕ್ಸಪ್ರೆಸ್ ಬೆಳಗಾವಿ ಜನರಿಗೆ ಅನುಕೂಲಕರವಾಗಿಲ್ಲ ಎನ್ನುವ ಕೂಗಿನ ಹಿನ್ನೆಲೆಯಲ್ಲಿ ಕಳೆದ ತಿಂಗಳು 29ರಂದು ಬೆಳಗಾವಿಯಿಂದ ಬೊಂಗಳೂರಿಗೆ ಹೊಸ ರೈಲ್ವೆಯನ್ನು ಆರಂಭಿಸಲಾಗಿದೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕೇವಲ ಒಂದೇ ವಾರದಲ್ಲಿ ಘೋಷಣೆ ಮಾಡಿ ತತ್ಕಾಲ್ ಟ್ರೇನ್ ಆರಂಭಿಸಿ, ಚಾಲನೆ ನೀಡಿದ್ದರು. ಆರಂಭದಲ್ಲಿ ಒಂದು ತಿಂಗಳು ಪ್ರಾಯೋಗಿಕವಾಗಿ ಆರಂಭಿಸಿ, ನಂತರ ಮತ್ತು ಮೂರು ತಿಂಗಳು ವಿಸ್ತರಿಸಲಾಗಿತ್ತು.

ಇದೀಗ ಸುರೇಶ ಅಂಗಡಿ ಟ್ವೀಟ್ ಮಾಡಿದ್ದು ಬೆಳಗಾವಿ-ಬೆಂಗಳೂರು ತತ್ಕಾಲ್ ಸುಪರ್ ಫಾಸ್ಟ್ ಎಕ್ಸಪ್ರೆಸ್ ಟ್ರೇನ್ ಗೆ ಬೆಳಗಾವಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ. ದಿನಕಳೆದಂತೆ ಜನರ ಸ್ಪಂದನೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ರೈಲು ಶಾಶ್ವತವಾಗಿ ಓಡುವ ಲಕ್ಷಣವಿದೆ. ಜತೆಗೆ ಇದಕ್ಕಿರುವ ತತ್ಕಾಲ್ ದರವನ್ನು ಸಾಮಾನ್ಯ ದರಕ್ಕೆ ಇಳಿಸಲಿ ಎನ್ನುವುದು ಬೆಳಗಾವಿ ಜನರ ಬೇಡಿಕೆಯಾಗಿದೆ.

Home add -Advt

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button