ಕೆಎಲ್ಇ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಸುರೇಶ ಕುಮಾರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:-
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವಲ್ಲಿ ಯಶಸ್ವಿ ಸಾಧನೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದ ಇಸ್ರೋ ಸಂಸ್ಥೆಯು ಚಂದ್ರಯಾನ-2 ಬಿಡುಗಡೆ ಮಾಡುವ ಮೂಲಕ ದೇಶದ ಜನತೆಗೆ ಮಹತ್ತರವಾದ ಸಂದೇಶ ಕೊಟ್ಟಿದೆ ಎಂದು ರಾಜ್ಯ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಹೇಳಿದರು.
ಕೆ.ಎಲ್.ಇ ಸೊಸೈಟಿಯ ವತಿಯಿಂದ ಇಂದು ಬೆಂಗಳೂರಿನ ಎಸ್.ನಿಜಲಿಂಗಪ್ಪ/ ಇಂಡಿಪೆಂಡೆಂಟ್ ಪಿಯು ಕಾಲೇಜ್ ನಲ್ಲಿ Azionare-2 ಎಂಬ ವಿಜ್ಞಾನಕ್ಕೆ ಒಳಗೊಂಡ ವಸ್ತು ಪ್ರದರ್ಶನ ಕಾರ್ಯಕ್ರಮವೊಂದನ್ನು ಸಚಿವ ಸುರೇಶ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ತಯಾರಿಸಿದ ರಾಕೇಟ್ ಒಂದನ್ನು ಪ್ರದರ್ಶಿಸುವ ಮೂಲಕ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆ.ಎಲ್.ಇ ಸೊಸೈಟಿಯ ವತಿಯಿಂದ ಬೆಂಗಳೂರಿನ ತಮ್ಮ ಶಾಲೆಗಳಲ್ಲಿ ಈ ರೀತಿಯ ವೈಜ್ಞಾನಿಕ ಮತ್ತು ವಿಜ್ಞಾನಕ್ಕೆ ಸಂಬಂಧಿಸಿ ವಸ್ತು ಪ್ರದರ್ಶನ ಕಾರ್ಯಕ್ರಮ ಪ್ರತಿವರ್ಷ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಡುತ್ತಿರುವುದು ತುಂಬಾ ಸಂತಸವಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಯಾರು ಮಾಡಿದ ವಿಜ್ಞಾನಕ್ಕೆ ಸಂಬಂಧಿಸಿದ ಮಾಡೆಲ್ ಗಳನ್ನು ಗುರುತಿಸಬೇಕು. ಈ ರೀತಿಯ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಮಾಡುತ್ತಲೇ ಇದ್ದರೆ ಶಾಲಾ-ಕಾಲೇಜುಗಳ ವೈಶಿಷ್ಠ್ಯತೆ ಹೆಚ್ಚುತ್ತದೆ ಎಂದು ಸಚಿವ ಸುರೇಶ ಕುಮಾರ್ ಅವರು, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಸಕ್ತಿ ತುಂಬಿದರು.
ಸುರೇಶ್ ಕುಮಾರ್ ಅವರಿಗೆ ಅಭಿನಂದನೆ:
ಈ ವೇಳೆ ಸುರೇಶ್ ಕುಮಾರ್ ಅವರು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್.ಸಿ.ಪಾಟೀಲ್, ರಾಜು. ಬಿ. ಕಟ್ಟಿ, ಡಾ. ಅರುಣ ಕುಮಾರ ಸೊನ್ನಪ್ಪನವರ ಅವರು ಸೇರಿ ಶಾಲು ಹೊದಿಸಿ, ಹೂವುಗುಚ್ಚ ಕೊಟ್ಟು ಸಚಿವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ವಿದ್ಯಾರ್ಥಿಯೊಬ್ಬನು ತಯಾರಿಸಿದ ಅಂದಮಕ್ಕಳಿಗೊಷ್ಕರ್ ಸೆನ್ಸರ್ ವಾಕಿಂಗ್ ಕಿಟ್ ವೊಂದನ್ನು ಅಂದ ವಿದ್ಯಾರ್ಥಿಗೆ ಸಚಿವರಿಂದ ವಿತರಿಸಲಾಯಿತು.
ನಂತರ ಕಾಲೇಜಿನ ವಿಧ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ವಸ್ತುಗಳನ್ನು ಸಚಿವ ಸುರೇಶ ಕುಮಾರ್ ಅವರು ವೀಕ್ಷಣೆ ಮಾಡಿ, ವಸ್ತಗಳ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಂದ ತಿಳಿದುಕೊಂಡರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ