ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಜ್ಞಾನಿಗಳು ಮತ್ತೊಂದು ಮೈಲುಗಲ್ಲು ಸಾಧಿಸಿದ್ದು, ಸೂರ್ಯಯಾನ ಹಿನ್ನೆಲೆಯಲ್ಲಿ ಆದಿತ್ಯ L-1 ನೌಕೆ ಯಶಸ್ವಿ ಉಡಾವಣೆಯಾಗಿದೆ.
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳು ಸೂರ್ಯ ಯಾನ ಕೈಗೊಂಡಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 11:50ಕ್ಕೆ ಆದಿತ್ಯ L-1 ಉಡಾವಣೆ ಮಾಡಕಾಗಿದ್ದು, ಯಶಸ್ವಿ ಉಡಾವಣೆಯಾಗಿದೆ. ಉಡಾವಣೆಗೊಂಡ ನೌಕೆ ಮೊದಲ ಹಾಗೂ 2ನೇ ಹಂತದಿಂದ ಯಶ್ಸ್ವಿಯಾಗಿ ಬೇರ್ಪಟ್ಟಿದೆ.
ಆದಿತ್ಯ ಎಲ್ -1 ಹೊತ್ತ ಪಿಎಸ್ ಎಲ್ ವಿ ನಿಗದಿತ ಕಕ್ಷೆಯಲ್ಲಿ ಸಾಗುತ್ತಿದೆ. ಆದಿತ್ಯ ಎಲ್ -1 ಸೂರ್ಯನ ಮೇಲ್ಮೈ, ತಾಪಮಾನ, ಸೂರ್ಯನ ಕಿರಣಗಳು, ಸೂರ್ಯನ ಸುತ್ತಮುತ್ತಲ ವಾತಾವರಣ ಸೇರಿದಂತೆ ಹಲವು ವಿಷಯಗಳ ಅಧ್ಯಯನ ನಡೆಸಲಿದೆ. ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಸೂರ್ಯಯಾನ ಕೈಗೊಂಡಿರುವ ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಭಾರತೀಯರು ಮಾತ್ರವಲ್ಲ ಇಡೀ ವಿಶ್ವವೇ ಶುಭ ಹಾರೈಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ