Latest

ನಾಳೆ ಚಾಮುಂಡಿ ದೇವಿಯ ದರ್ಶನಕ್ಕಿಲ್ಲ ಅವಕಾಶ

ಪ್ರಗತಿವಾಹಿನಿ ಸುದ್ದಿ; ಮೈಸೂರು : ನಾಳೆ ಅ.25 ರಂದು ಸೂರ್ಯ ಗ್ರಹಣ ಹಿನ್ನಲೆಯಲ್ಲಿ ತಾಯಿ ಚಾಮುಂಡಿ ದೇವಿಯ ದರ್ಶನ ಇರುವುದಿಲ್ಲವೆಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯ ನಿರ್ವಹಕಾಧಿಕಾರಿ ತಿಳಿಸಿದ್ದಾರೆ.

27 ವರ್ಷಗಳ ನಂತರ ಮೊದಲ ಬಾರಿಗೆ ದೀಪಾವಳಿ ಅಮವಾಸ್ಯೆಯ ಸಂದರ್ಭದಲ್ಲಿ ಬಂದಿರುವ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮಂಗಳವಾರ (ಅ.25) ಮದ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿ ತಾಯಿಯ ದರ್ಶನ ಇರುವುದಿಲ್ಲ.

ಆದರೆ ಗ್ರಹಣದ ಪ್ರಾರಂಭ ಸ್ಪರ್ಷಕಾಲ ಮತ್ತು ಮೋಕ್ಷ ಕಾಲ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಗ್ರಹಣ ಬಿಟ್ಟ ನಂತರ ದೇವಾಲಯವನ್ನು ಸ್ವಚ್ಛಗೊಳಿಸಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 1 ಗಂಟೆಯಿಂದ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ಇರುವುದಿಲ್ಲ ಎಂದು ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸ್ ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಡ್ರೈವರ್ ಸಾವು; ಪಲ್ಟಿಯಾದ ಬಸ್

Home add -Advt

https://pragati.taskdun.com/latest/rajahamsabus-driverheart-attackdeath14-injurd/

Related Articles

Back to top button