Latest

ಸ್ಟಂಪ್ ಮೈಕ್ ನಲ್ಲಿ ಸೆರೆಯಾಯ್ತು ಸೂರ್ಯಕುಮಾರ್ ಔಟಾಗುವ ಕ್ಷಣ ಮೊದಲು ಹೇಳಿದ ಮಾತು

ಪ್ರಗತಿವಾಹಿನಿ ಸುದ್ದಿ; ಬ್ರಿಸ್ಬೇನ್: ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ನಡೆದ ಭಾರತ – ಆಸ್ಟ್ರೇಲಿಯಾ ನಡುವಿನ ವಿಶ್ವ ಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡದ ಹಿಟರ್ ಸೂರ್ಯಕುಮಾರ್ ಯಾಧವ್ ಅವರು ಔಟಾಗುವ ಕ್ಷಣ ಮೊದಲು ಹೇಳಿದ ಮಾತು ಸ್ಟಂಪ್ ಕ್ಯಾಮರಾದ ಮೈಕ್ ನಲ್ಲಿ ಸೆರೆಯಾಗಿ ವೈರಲ್ ಆಗಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೇಟ್ ನಷ್ಟಕ್ಕೆ 186 ರನ್ ಗಳಿಸಿತು. 32 ಬಾಲ್ ಗೆ 50 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ , “ಮಾರನೇಕಾ ಮೂಡ್ ನಹಿ ಕರ್ ರಹಾಹೈ” ( ಹೊಡೆಯಲು ಮೂಡ್ ಬರುತ್ತಿಲ್ಲ ) ಎಂದು ಹೇಳುತ್ತಾರೆ. ಅದರ ನಂತರದ ಬಾಲಿಗೆ ಅವರು ಔಟಾಗಿದ್ದಾರೆ.

ಸ್ಟಂಪ್ ಕ್ಯಾಮರಾದಲ್ಲಿ ಸೆರೆಯಾದ ಈ ದೃಷ್ಯ ಹಾಗೂ ಸೂರ್ಯಕುಮಾರ್ ಅವರ ಮಾತು ಎಲ್ಲೆಡೆ ವೈರಲ್ ಆಗಿದೆ.

ಮೊಹಮ್ಮದ್ ಶಮಿ ಬಿರುಗಾಳಿ
ಅಂತಿಮವಾಗಿ ಈ ಪಂದ್ಯದಲ್ಲಿ ಭಾರತ 6 ರನ್ ಗಳಿಂದ ಜಯಗಳಿಸಿದೆ. ಅದರಲ್ಲೂ ಭಾರತದ ವೇಗಿ ಮೊಹಮ್ಮದ್ ಶಮಿ ಕೊನೇಯ ಓವರ್ ನಲ್ಲಿ 4 ವಿಕೇಟ್ ಕಬಳಿಸಿದ್ದು ಭಾರತ ತಂಡದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು. ಅದಕ್ಕೂ ಮೊದಲಿನ ಓವರ್ ನಲ್ಲಿ ಹರ್ಷಲ್ ಪಟೇಲ್ 2 ವಿಕೇಟ್ ಕೆಡವಿದ್ದರು. ಆಸ್ಟ್ರೇಲಿಯಾ ತಂಡ ಕೊನೇಯ 2 ಓವರ್ ನಲ್ಲಿ 6 ವಿಕೇಟ್ ಕಳೆದುಕೊಂಡು 180 ರನ್ ಗಳಿಗೆ ಆಲೌಟ್ ಆಯಿತು.

ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ವರ್ಗಾವಣೆ

https://pragati.taskdun.com/politics/pm-kisan-samman-yojnakarnataka-farmers1007-26-crore-release/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button