
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಪೀರನವಾಡಿಯ ಸಾಯಿ ಕಾಲನಿ ಮಚ್ಛೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾವನ್ನು ಆಕಾಶ ದೊಡ್ಡಮನಿ ಎಂಬಾತನಿಂದ ತಂದು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ ಆರೋಪಿಗಳನ್ನು ಬಂಧಿಸಲಾಗಿದೆ.
ಅತಿಥಿ ಸನ್ಸಾರಿ ಮುಲ್ಲಾಸಾ ಹಾಗೂ ಸೈಫಲಿ ಆಯುಬಹುಸೇನ ಮಾಡಿವಾಲೆ ಎಂಬ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಬಂದ ಮಾಹಿತಿಯಂತೆ ಗ್ರಾಮೀಣ ಪೊಲೀಸರು ದಾಳಿ ಮಾಡಿ ಆರೋಪಿತರಿಂದ 40,000 ರೂ. ಮೌಲ್ಯದ 1 ಕೆಜಿ 366 ಗ್ರಾಂ ಗಾಂಜಾ, ರೂ.1000ರೂ. ಹಣ, 20.000 ರೂ ಮೌಲ್ಯದ ಮೋಬೈಲ್ ಹಾಗೂ 53,000 ರೂ. ಮೌಲ್ಯದ ಐ-ಫೋನ್ ಮತ್ತು ಕೃತ್ಯಕ್ಕೆ ಬಳಸಿದ 40 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.142/2025 ಕಲಂ.20(b),(i)(B) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ.