ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ತಾಲೂಕಿನ ಅಭಿವೃದ್ಧಿಗೆ ಸರಕಾರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಳದ ಅಧಿವೇಶನಕ್ಕೆ ಪಾದಯಾತ್ರೆ ಮೂಲಕ ಆಗಮಿಸಲು ಶಾಸಕಿ ಡಾ.ಅಂಜಲಿ ನಿಂಬಾಳಕರ್ ನಿರ್ಧರಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಖಾನಾಪುರ ಅತ್ಯಂತ ಹಿಂದುಳಿದ, ಕೊನೆಯ ತಾಲೂಕು. ನೂರಾರು ಸಮಸ್ಯೆಗಳಿವೆ. ಸರಕಾರ ಯಾವುದೇ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ. ಜನರಿಗೆ ಮನೆ ಇಲ್ಲ. ಪ್ರವಾಹ ಪರಿಹಾರ ನೀಡಿಲ್ಲ. ಸಂಪರ್ಕ ರಸ್ತೆಗಳಿಲ್ಲ. ಸರಕಾರಕ್ಕೆ ಕಣ್ಣು, ಕಿವಿ ಏನೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸಿ ಸಾಕಷ್ಟು ಬಾರಿ ಸರಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಇಲ್ಲ. ಹಾಗಾಗಿ ಸರಕಾರದ ಗಮನ ಸೆಳೆಯಲು ಫೆ.12ರಂದು ಪಾದಯಾತ್ರೆಯ ಮೂಲಕ ಸುವರ್ಣ ವಿಧಾನಸೌಧ ಚಲೋ ನಡೆಸಲಾಗುವುದು. ಸಾವಿರಾರು ರೈತರು, ನಾಗರಿಕರು ಭಾಗವಹಿಸಲಿದ್ದಾರೆ. ಇದರಿಂದಲಾದರೂ ಸರಕಾರ ಕಣ್ಣು ತೆರೆಯುವುದೋ ಕಾದು ನೋಡೋಣ ಎಂದು ಹೇಳಿದರು.
ಇದೇ ವೇಳೆ ಸಂಸದ ಅನಂತಕುಮಾರ ಹೆಗಡೆಯವರ ವಿರುದ್ಧ ಅಂಜಲಿ ನಿಂಬಾಳಕರ್ ಆಕ್ರೋಶ ವ್ಯಕ್ತಪಡಿಸಿದರು. ಅವರು ಇಲ್ಲಿನ ಜನ ಯಾವ ಸಮಸ್ಯೆಗೂ ಸ್ಪಂದಿಸುತ್ತಿಲ್ಲ. ಇಲ್ಲಿಗೆ ಭೇಟಿಯನ್ನೂ ನೀಡುತ್ತಿಲ್ಲ. ಅವರೊಬ್ಬ ಪುಣ್ಯಾತ್ಮ ಸಂಸದ ಎಂದು ಅಸಮಾಧಾವ ವ್ಯಕ್ತಪಡಿಸಿದರು.
ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ರಸ್ತೆಯಲ್ಲೇ ಕುಳಿತು ಅಂಜಲಿ ನಿಂಬಾಳಕರ್ ಈಚೆಗೆ ಧರಣಿ ನಡೆಸಿದ್ದರು.
ನಮಗೆ ಯಾರೂ ಎದುರಾಳಿಗಳಿಲ್ಲ. ನಮ್ಮ ಮತ ನಾವು ಹಾಕಿಸಿಕೊಂಡರೆ ಸಾಕು – ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ