Karnataka News

ಸ್ವಚ್ಛತೆಯ ಜಾಗೃತಿಗಾಗಿ ಗೋವಾ ಗಡಿಯವರೆಗೆ ಪಾದಯಾತ್ರೆ

ಪ್ರಗತಿ ವಾಹಿನಿ ಸುದ್ದಿ,ಕಾರವಾರ: ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದ ಪಹರೇ ವೇದಿಕೆ ವತಿಯಿಂದ ಕಾರವಾರ ನಗರದಿಂದ ಗೋವಾ ಗಡಿಯವರೆಗೆ ಪಾದಯಾತ್ರೆ ರವಿವಾರ ನಡೆಸಲಾಯಿತು.
ಪ್ರತಿ ಶನಿವಾರವನ್ನು ಸ್ವಚ್ಚತೆಗಾಗಿ ಮೀಸಲಿಟ್ಟು ನಿರಂತರವಾಗಿ ಸ್ವಚ್ಛತಾ ಕಾರ್ಯಗಳನ್ನು ನಡೆಸಿಕೊಂಡು ಬಂದ ಕಾರವಾರ ಪಹರೆ ವೇದಿಕೆಯೂ 8 ವರ್ಷ ಪೂರೈಸಿದ ಕಾರ್ಯಕ್ರಮದ ಭಾಗವಾಗಿ ನಗರದ ಸುಭಾಶ್ ವೃತ್ತದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಸುಭಾಶ್ಚ್ಚಂದ್ರ ಬೋಸ್ರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಪಾದಯಾತ್ರೆಯ ಗೌರವಾಧ್ಯಕ್ಷರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ 8 ವರ್ಷಗಳಿಂದ ಪಹರೆ ವೇದಿಕೆಯೂ ಸ್ವಚ್ಚತೆಗಾಗಿ ದುಡಿಯುತ್ತಿರುವುದು ಒಳ್ಳೆಯ ಕೆಲಸ. ಅಲ್ಲದೆ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇಂತಹ ಸಮಾಜ ಸೇವೆಯಿಂದ ಮನಸ್ಸಿಗೆ ಖುಷಿಯಾಗುತ್ತದೆ.
ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು ಇಂತಹ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಖುಷಿಯಾಗುತ್ತಿದೆ. ಪಹರೆ ವೇದಿಕೆಗೆ ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಲು ಆ ದೇವರು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಗೋವಾಗಡಿಯಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ವಿಶ್ವ ಕೊಂಕಣಿ ಪರಿಷದ್ ಪ್ರಧಾನ ಕಾರ್ಯದರ್ಶಿ ಗೌರೀಶ ವೆರ್ಣೇಕರ್, ಲೋಲಿಯೆಂ ಗ್ರಾ.ಪಂ ಸದಸ್ಯ, ಸಚಿನ್ ನಾಯ್ಕ,
 ಕಾಣಕೋಣ ಲಯನ್ಸ್ ಕ್ಲಬ್ ಅಧ್ಯಕ್ಷೆ ಯೋಹಿತಾ ವೆರ್ಣೇಕರ್, ಕಾರವಾರ ಡಿವೈಎಸ್ಪಿ ವ್ಯಾಲೈಂಟನ್ ಡಿಸೋಜಾ, ನಗರಸಭೆ ಉಪಾಧ್ಯಕ್ಷ ಪಿ.ಪಿ. ನಾಯ್ಕ, ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.
https://pragati.taskdun.com/many-dignitaries-will-coming-to-belagavi-on-monday-including-the-cm/

 

 

Home add -Advt

Related Articles

Back to top button