ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚೆಗೆ ಮುತವಾಡ ಗ್ರಾಮದ ಹನುಮಂತ ದೇವರ ಗುಡಿ ಹಾಗೂ ಮುಗಳಿಹಾಳ ಗ್ರಾಮದ ಶ್ರೀ ಲಕ್ಷ್ಮೀ ದೇವರ ಗುಡಿ ಕಳ್ಳತನ ಮಾಡಿದ ಇಬ್ಬರು ಕಳ್ಳರನ್ನು ಮುರಗೋಡ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಮುತವಾಡ ಗ್ರಾಮದ ಹನುಮಂತ ದೇವರ ಗುಡಿಯಲ್ಲಿ ಇಟ್ಟಿದ್ದ ದ್ಯಾಮಮ್ಮಾದೇವಿ ಹಾಗೂ ದುರ್ಗಮ್ಮಾದೇವಿ ಮೂರ್ತಿಯ ಕೊರಳಲ್ಲಿದ್ದ ತಲಾ 2.5 ಗ್ರಾಂ ತೂಕದ ಬಂಗಾರದ ತಾಳಿ ಎರಡು ಮತ್ತು 250 ಗ್ರಾಂ ತೂಕದ ಬೆಳ್ಳಿಯ ದುರ್ಗಾದೇವಿಯ ಮುಖ ಹಾಗೂ ಮುಗಳಿಹಾಳ ಗ್ರಾಮದ ಶ್ರೀ ಲಕ್ಷ್ಮೀ ದೇವರ ಗುಡಿಯ 400 ಗ್ರಾಂ ತೂಕದ ಬೆಳ್ಳಿ ಬೆತ್ತಗಳು, 100 ಗ್ರಾಂ ತೂಕದ ಬೆಳ್ಳಿ ಹಸ್ತಗಳು, 2 ಗ್ರಾಂ ತೂಕದ ಬಂಗಾರದ ತಾಳಿ. 2 ಗ್ರಾಂ ತೂಕದ ಬಂಗಾರದ ಮೂಗಿನ ನತ್ತು ಸೇರಿದಂತೆ ಒಟ್ಟು 1,30,500 ರೂಪಾಯಿ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಮುರಗೋಡ ಪೊಲೀಸರ ಕಾರ್ಯಾಚರಣೆಯನ್ನು ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
https://pragati.taskdun.com/asideathheart-attackbangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ