ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಿವಾಸಕ್ಕೆ ಮರಾಠಾ ಸಮಾಜದ ಸ್ವಾಮೀಜಿ ಭೇಟಿ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬಾಳ್ಕರ್ ಅವರ ಬೆಳಗಾವಿಯ ನಿವಾಸಕ್ಕೆ ಕರ್ನಾಟಕ ರಾಜ್ಯದ ಮರಾಠಾ ಸಮಾಜದ ಜಗದ್ಗುರು, ಗವೀಪುರಂ ಗೋಸಾಯಿ ಸಂಸ್ಥಾನ ಶ್ರೀ ಭವಾನಿ ದತ್ತ ಪೀಠದ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿಯವರು ಗುರುವಾರ ಸಂಜೆ ಸೌಹಾರ್ಧಯುತ ಭೇಟಿ ನೀಡಿದ್ದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಸ್ವಾಮೀಜಿಯವರನ್ನು ಸ್ವಾಗತಿಸಿ, ಗೌರವಿಸಿದರು. ಮರಾಠಾ ಸಮಾಜದ ಸ್ಥಿತಿಗತಿ, ಮರಾಠಾ ಸಂಸ್ಕೃತಿ, ಮರಾಠ ಸಮುದಾಯಕ್ಕೆ ಶೈಕ್ಷಣಿಕ ಸೌಲಭ್ಯ ಸೇರಿದಂತೆ ಹಲವಾರು ವಿಷಯಗಳನ್ನು ಸ್ವಾಮೀಜಿಗಳು ಈ ಸಂದರ್ಭದಲ್ಲಿ ಚರ್ಚಿಸಿದರು.
ಅಲ್ಲದೆ ಮರಾಠ ಧರ್ಮದ ಕುರಿತು ಜಾಗೃತಿ ಮೂಡಿಸಲು, ಸಾಮಾಜಿಕ ಜಾಗೃತಿಗಾಗಿ ತಾವು ಕೈಗೊಂಡಿರುವ ಕೆಲಸಗಳ ಕುರಿತು ಮತ್ತು ಮುಂದೆ ಆಗಬೇಕಿರುವ ಕೆಲಸಗಳ ಕುರಿತು ಸ್ವಾಮೀಜಿಗಳು ಮಾಹಿತಿ ನೀಡಿದರು.
ಬಾಳು ದೇಸೂರಕರ್, ಉಮೇಶ ಪಾಟೀಲ, ಯುವರಾಜ ಕದಂ, ಸಾತೇರಿ ಕೋಕಿತ್ಕರ್, ಪ್ರಹ್ಲಾದ ಚಿರಮುರಕರ್ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ