
ಪ್ರಗತಿವಾಹಿನಿ ಸುದ್ದಿ: ಶಾಂತಲಿಂಗ ಸ್ವಾಮೀಜಿ ಮಠದ ಆವರಣದಲ್ಲಿ ನಿಂತು ಕೈಯಲ್ಲಿ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಇಲ್ಲಿನ ಉಡಚಣ ಗ್ರಾಮದ ಹಿರೇಮಠದ ಶಾಂತಲಿಂಗ ಸ್ವಾಮೀಜಿ ಕೆಲ ದಿನಗಳ ಹಿಂದೆ ಕುಡಿದು ಬಂದು ಮಠದಲ್ಲಿ ರಂಪಾಟ ನಡೆಸಿದ್ದರಂತೆ. ಇದರಿಂಗ ಭಕ್ತರು ಆಕ್ರೋಶಗೊಂಡು ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಿದ್ದರು. ಅಲ್ಲದೇ ಹೊಸ ಮಠಾಧೀಶರನ್ನು ನೇಮಕ ಮಾಡುವ ಚರ್ಚೆಯೂ ನಡೆದಿತ್ತು. ವಿಷಯ ತಿಳಿಯುತ್ತಿದ್ದಂತೆ ವಾರದ ಹಿಂದೆ ಮತ್ತೆ ಶಾಂತಲಿಂಗ ಸ್ವಾಮೀಜಿ ಮಠಕ್ಕೆ ಬಂದಿದ್ದಾರೆ.
ಈಗ ಮಠದ ಆವರಣದಲ್ಲಿ ನಿಂತು ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದ್ದು, ಈ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸ್ವಾಮೀಜಿಯವರ ಈ ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ.



