ಪ್ರಗತಿವಾಹಿನಿ ಸುದ್ದಿ, ಟೊರಾಂಟೊ: ಕೆನಡಾದ ಟೊರಾಂಟೊದಲ್ಲಿರುವ ಶ್ರೀ ಸ್ವಾಮಿನಾರಾಯಣ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಭವ್ಯ ಕಟ್ಟಡವನ್ನು ಹೊಂದಿರುವ ದೇಗುಲದ ಮೇಲೆ ಭಾರತ ವಿರೋಧಿ ಬರಹಗಳನ್ನು ಕೂಡ ಬರೆಯುವ ಮೂಲಕ ದುಷ್ಕರ್ಮಿಗಳು ತಮ್ಮ ದ್ವೇಷ ಹೊರಗೆಡವಿದ್ದಾರೆ.
ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಗುರುವಾರ ನಡೆದ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಟ್ವಿಟರ್ನಲ್ಲಿ ನೀಡಿದ ಹೇಳಿಕೆಯಲ್ಲಿ, ಹೈಕಮಿಷನ್, “ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ದುಷ್ಕರ್ಮಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿದ್ದೇವೆ” ಎಂದು ಹೇಳಿದೆ.
ದುಷ್ಕರ್ಮಿಗಳ ಈ ಕೃತ್ಯಕ್ಕೆ ಜಾಗತಿಕ ಮಟ್ಟದಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿವೆ.
ನದಿಗೆ ಪ್ಲಾಸ್ಟಿಕ್ ಎಸೆದಿದ್ದಕ್ಕೆ ಟೀಕೆ; ಕೋವಿಡ್ ನಿಂದ ತನ್ನ ಮೆದುಳು ಸರಿಯಿಲ್ಲ ಎಂದ ನಟಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ