ಪ್ರಗತಿವಾಹಿನಿ ಸುದ್ದಿ, ನವದೆಹಲಿ – ತಬ್ಲಿಘಿಗಳಿಂದಾಗಿ ದೇಶದಲ್ಲಿ 3ನೇ ಹಂತದ ಲಾಕ್ ಡೌನ್ ಮಾಡಬೇಕಾಗಿದೆ. ನಿಜಾಮುದ್ದೀನ್ ಸಮಾವೇಶದ ತಪ್ಪು ಮಾಡಿರದಿದ್ದರೆ ಇಷ್ಟೊಂದು ವೇಘವಾಗಿ ಕೊರೋನಾ ಹರಡುತ್ತಿರಲಿಲ್ಲ. ಇಷ್ಟೊಂದು ದಿನ ಲಾಕ್ ಡೌನ್ ಮಾಡಬೇಕಾಗಿರಲಿಲ್ಲ ಎಂದು ಕೇಂದ್ರ ಅಲ್ಪಸಂಖ್ಯೆತರ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಖಾಸಗಿ ಸಂಸ್ಥೆ ಕಾರ್ಯಕ್ರಮದಲ್ಲಿ ತಬ್ಲಿಘಿ ಸಮಾವೇಶ ಕೊರೋನಾದ ಶರವೇಗದ ಸಂವಾಹಕವಾಗಿ ಕೆಲಸ ಮಾಡಿದೆ ಎಂದು ನೇರವಾಗಿ ಹೇಳಿದ್ದಾರೆ.
ತಬ್ಲಿಘಿ ಸಮಾವೇಶದಿಂದಾಗಿ ದೇಶಾಂದ್ಯಂತ ಕೋವಿಡ್ -19 ವೇಗವಾಗಿ ಹರಡಲು ಕಾರಣವಾಯಿತು. ಆ ಸಂಘಟನೆ ಅದೊಂದು ತಪ್ಪು ಮಾಡರದಿದ್ದರೆ ದೇಶಾದಲ್ಲಿ 3ನೇ ಹಂತದ ಲಾಕ್ ಡೌನ್ ಮಾಡಬೇಕಾದ ಅಗತ್ಯವೇ ಇರಲಿಲ್ಲ ಎಂದು ಅವರು ಹೇಳಿದರು.
ಆದರೆ ತಬ್ಮಿಘಿ ಸಮಾವೇಶದ ಹಿನ್ನೆಲೆಯಲ್ಲಿ ಎಲ್ಲ ಮುಸ್ಲೀಮರನ್ನೂ ದೂಷಿಸುವುದು ಸರಿಯಲ್ಲ ಎಂದೂ ಅವರು ಹೇಳಿದ್ದಾರೆ.
ಸಂಬಂಧಿಸಿದ ಸುದ್ದಿ ಓದಿ –
ನಿಜಾಮುದ್ದೀನ್ ನಂಟಿಲ್ಲದಿದ್ದರೆ ಬೆಳಗಾವಿ ನೆಮ್ಮದಿ ಕೆಡುತ್ತಿರಲಿಲ್ಲ
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಕಳಿಸಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ