Kannada NewsKarnataka NewsLatest

*ಟ್ರೆಕಿಂಗ್ ಗೆ ತೆರಳಿದ್ದ ಯುವತಿ ನಾಪತ್ತೆ*

ಪ್ರಗತಿವಾಹಿನಿ ಸುದ್ದಿ: ತಡಿಯಂಡಮೊಳ್ ಬೆಟ್ಟಕ್ಕೆ ಟ್ರೆಕಿಂಗ್ ಗೆ ಹೋಗಿದ್ದ ಯುವತಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಅವರ ಸುಳಿವು ಸಿಗುತ್ತಿಲ್ಲ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕೆಬ್ಬೆ ಗ್ರಾಮದ ತಡಿಯಂಡಮೊಳ್ ಬೆಟ್ಟಕ್ಕೆ ಕೇರಳ ಮೂಲದ ಯುವತಿ ಚಾರಣಕ್ಕೆ ತೆರಳಿದ್ದರು. ಆದರೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಶರಣ್ಯ ಜಿ.ಎಸ್ ನಾಪತ್ತೆಯಾಗಿರುವ ಯುವತಿ.

ತಡಿಯಂಡಮೋಳ್ ಬೆಟ್ಟವು ಕೊಡಗು ಜಿಲ್ಲೆಯ ಅತಿ ಎತ್ತರದ (ಸುಮಾರು 1,748 ಮೀಟರ್) ಮತ್ತು ಕರ್ನಾಟಕದ 3ನೇ ಎತ್ತರದ ಶಿಖರವಾಗಿದೆ. ಚಾರಣ ಪ್ರಿಯರಿಗೆ ಬಲು ಇಷ್ಟವಾದ ತಾಣ. ಖಾಸಗಿ ಹೋಂ ಸ್ಟೇನಲ್ಲಿ ವಾಸವಾಗಿದ್ದ ಶರಣ್ಯ, ನಿನ್ನೆ ಒಬ್ಬರೇ ಚಾರಣಕ್ಕೆ ಹೋಗಲು ಮುಂದಾಗಿದ್ದರು. ಆದರೆ ಕಾಡಾನೆ ಹಾವಳಿ ಹೆಚ್ಚಿರುವುದರಿಂದ ಅರಣ್ಯ ಸಿಬ್ಬಂದಿಗಳು ಬೇರೆಯವರ ಜೊತೆ ಕಳುಹಿಸಿದ್ದರು.

Home add -Advt

ನಿನ್ನೆ ಸಂಜೆಯಾದರೂ ಶರಣ್ಯ ವಾಪಸ್ ಆಗಿಲ್ಲ. ಇದರಿಂದ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಅದರೆ ಎಲ್ಲಿಯೂ ಸುಳಿವಿಲ್ಲ. ಇಂದು ಕೂಡ ಶರಣ್ಯಳಿಗಾಗು ಹುಡುಕಾಟ ಮುಂದುವರೆದಿದೆ.


Related Articles

Back to top button