Latest

ಯುವತಿಗೆ ಬಲವಂತದಿಂದ ಚುಂಬಿಸಿ ” ನಾನು ನಿನ್ನ ಅಂಕಲ್” ಎಂದ ಫುಡ್ ಡೆಲಿವರಿ ಬಾಯ್

ಪ್ರಗತಿವಾಹಿನಿ ಸುದ್ದಿ, ಪುಣೆ: ಮನೆಗೆ ಫುಡ್ ಡೆಲಿವರಿಗಾಗಿ ಬಂದ ಝೊಮೆಟೊ ಬಾಯ್ 19 ವರ್ಷದ ಯುವತಿಯನ್ನು ಬಲವಂತದಿಂದ ಚುಂಬಿಸಿದ ಘಟನೆ ಪುಣೆಯ ಯೆವಳೆವಾಡಿಯಲ್ಲಿ ನಡೆದಿದೆ.

ಯುವತಿ ಝೊಮೆಟೊದಲ್ಲಿ ಫುಡ್ ಆರ್ಡರ್ ಮಾಡಿದ್ದರು. ಅದರ  ಡೆಲಿವರಿಗೆ ಬಂದಿದ್ದ ರಾಯೀಸ್ ಶೇಖ್ ಆಕೆಗೆ ನೀರು ಕೊಡುವಂತೆ ಕೇಳಿದ. ನೀರು ತಂದು ಕೊಡುತ್ತಿದ್ದಂತೆ ಆಕೆಯ ಕೈ ಹಿಡಿದು ಸೆಳೆದುಕೊಂಡ ರಾಯೀಸ್ ಆಕೆಗೆ ಬಲವಂತವಾಗಿ ಎರಡು ಬಾರಿ ಚುಂಬಿಸಿದ್ದಾಗಿ ಯುವತಿ ಆರೋಪಿಸಿದ್ದಾರೆ.

ಯುವತಿ ತೀವ್ರವಾಗಿ ವಿರೋಧಿಸುತ್ತಿದ್ದಂತೆ ಅಲ್ಲಿಂದ ಫೇರಿಕಿತ್ತ ಆರೋಪಿ ನಂತರದಲ್ಲಿ ಆಕೆಯ ಮೊಬೈಲ್ ಗೆ ಮೆಸೇಜ್ ಮಾಡಿ ” ನಾನು ನಿನ್ನ ಅಂಕಲ್ ಇದ್ದ ಹಾಗೆ” ಎಂದು ಹೇಳಿಕೊಂಡಿದ್ದಾನೆ.

ಯುವತಿ ದೂರಿನ ಆಧಾರದಲ್ಲಿ ಪೊಲೀಸರು ರಾಯೀಸ್ ನನ್ನು ಬಂಧಿಸಿದ್ದು, ಆರೋಪಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾನೆ.

ಸೋನಂ ಕಪೂರ್- ಆನಂದ್ ಅಹುಜಾ ದಂಪತಿ ಜೀವನದಲ್ಲಿ ಹೊಸ ‘ಗಾಳಿ’

Related Articles

Back to top button