Latest

ಅನುಭವ ಮಂಟಪದಲ್ಲಿ ದರ್ಗಾ ನಿರ್ಮಾಣವಾಗಿದೆ; ಶಾಕಿಂಗ್ ಮಾಹಿತಿ ನೀಡಿದ ಶಾಸಕ ಶರಣು ಸಲಗ

ಪ್ರಗತಿವಾಹಿನಿ ಸುದ್ದಿ; ಬೀದರ್: ವಾರಣಾಸಿ ಜ್ಞಾನವಾಪಿ ಮಸೀದಿಯಲ್ಲಿ ದೇವರ ವಿಗ್ರಹಗಳು ಪತ್ತೆ ವಿವಾದ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ರಾಜ್ಯದಲ್ಲಿಯೂ ಮಂದಿರ-ಮಸೀದಿ ದಂಗಲ್ ಆರಂಭವಾಗಿದ್ದು, ಮಂಗಳೂರಿನ ಮಳಲಿ ಮಸೀದಿ ವಿಚಾರದ ಬೆನ್ನಲ್ಲೇ ಇದೀಗ ಜಿಲ್ಲೆ ಜಿಲ್ಲೆಗಳಿಗೂ ವಿವಾದ ವ್ಯಾಪಿಸಿದೆ.

ಬೆಳಗಾವಿಯ ರಾಮದೇವ ಗಲ್ಲಿ ಮಸೀದಿ ಪಕ್ಕದಲ್ಲೇ ಆಂಜನೇಯ ದೇವಸ್ಥಾನವಿದೆ. ಮಂದಿರವನ್ನು ಕೆಡವಿ ದೊಡ್ದ ಮಸೀದಿ ಕಟ್ಟಲಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ ಎದು ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಬೀದರ್ ಜಿಲ್ಲೆಯ ಬಸವಕಲ್ಯಾಣ ಶಾಸಕ ಶರಣು ಸಲಗ, ಬಸವಣ್ಣನ ಕಾಲದ ಅನುಭವ ಮಂಟಪ ದರ್ಗಾ ಆಗಿದೆ ಎಂದು ಹೆಳಿದ್ದಾರೆ.

ಬಸವಣ್ಣನ ಕಾಲದಲ್ಲಿದ್ದ ಅನುಭವ ಮಂಟಪವನ್ನು ಪೀರ್ ಪಾಷಾ ದರ್ಗಾವನ್ನಾಗಿ ಮಾಡಲಾಗಿದೆ. ಶೈವ ಪರಂಪರೆಯ ಕಟ್ಟಡದ ರೂಪದಲ್ಲಿ ಈ ದರ್ಗಾ ಇದ್ದು, ಅನುಭವ ಮಂಟಪದ ಜಾಗವನ್ನು ದರ್ಗಾ ಮಾಡಿಕೊಂಡಿದ್ದಾರೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪೀಪ್ ಪಾಷಾ ದರ್ಗಾದಲ್ಲಿ ಹಿಂದೂ ದೇವರ ಹಲವು ಕುರುಹುಗಳು ಪತ್ತೆಯಾಗಿವೆ. ಮಂಟಪ, ಗೋಡೆಗಳ ಮೇಲೆ ದೇವರ ಮೂರ್ತಿ, ನೀರಾನೆ ರೀತಿಯ ಕೆತ್ತನೆಗಳನ್ನು ಕಾಣಬಹುದಾಗಿದೆ. ಈ ಜಾಗ ಮತ್ತೆ ಅನುಭವ ಮಂಟಪವಾಗಬೇಕು ಎಂಬುದೇ ನಮ್ಮ ಆಶಯ. ಆ ನಿಟ್ಟಿನಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ

Home add -Advt

Related Articles

Back to top button