ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಶಾಸಕಿ ಡಾ. ಅಂಜಲಿ ನಿಂಬಾಳಕರ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸಂಗರಗಾಳಿ ಗ್ರಾಮದಲ್ಲಿ ಸುಮಾರು ೬೦ ಲಕ್ಷ ರೂ.ಗಳ ವೆಚ್ಚದಲ್ಲಿ ಸಂಗರಗಾಳಿ ಗ್ರಾಮದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ, ಮಾಸ್ಕೆನಟ್ಟಿ ಗ್ರಾಮದಲ್ಲಿ ೬೦ ಲಕ್ಷ ರೂ.ಗಳ ವೆಚ್ಚದ ಭೂರಣಕಿ – ಸೋಣನೆಟ್ಟಿ ಸಂಪರ್ಕ ರಸ್ತೆ ಭೂಮಿ ಪೂಜೆ ನೆರವೇರಿಸಿದರು.
ಕರಿಕಟ್ಟಿ ಗ್ರಾಮದಲ್ಲಿ ಅಂದಾಜು ವೆಚ್ಚ ೩೫ ಲಕ್ಷ ರೂ.ಗಳ ಸಿ.ಸಿ.ರಸ್ತೆ ನಿರ್ಮಾಣದ ಕಾಮಗಾರಿಯ ಭೂಮಿ ಪೂಜೆ ನಡೆಸಿದರು. ಬಳಿಕ ಗ್ರಾಮದ ಹಿರಿಯರು ಮಹಿಳೆಯರು ಶಾಸಕರನ್ನು ಸತ್ಕರಿಸಿ ಅಭಿಮಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಖಾನಾಪುರ ಸಮೀಪದ ಕೋಂಗಳಾ, ಪಾಸ್ಟೋಳ್ಳಿ, ಗವ್ಹಾಳಿ ಗ್ರಾಮಸ್ಥರು ಶಾಸಕರ ಬಳಿ ನಾಗರಿಕ ಆರೋಗ್ಯ ತಪಾಸಣೆ ನಡೆಸಲು ಮನವಿ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅಂಜಲಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅದೇಶ ನೀಡಿ ಈ ಮೂರು ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಮಾಡಿದರು. ರು.