Belagavi NewsBelgaum NewsKannada NewsKarnataka News

ಮುಳುಗುತ್ತಿದ್ದ ಮಹಿಳೆ ರಕ್ಷಿಸಿದ ಪೊಲೀಸ್: ಸಿಎಂ ಪ್ರಶಸ್ತಿಗೆ ಶಿಫಾರಸ್ಸು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೊಟೆ ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಬೆಳಗಾವಿ ಪೊಲೀಸ್ ಕಾನ್ ಸ್ಟೆಬಲ್ ಹೆಸರನ್ನು ಮುಖ್ಯಮಂತ್ರಿ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ.

ಪೊಲೀಸ್ ಕಾನಸ್ಟೆಬಲ್ ಕಾಶಿನಾಥ ಇರಗಾರ್ ಎನ್ನುವವರು ಶನಿವಾರ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯೋರ್ವಳನ್ನು ರಕ್ಷಿಸಿದ್ದಾರೆ. ನೀರಿನಲ್ಲಿ ಮಹಿಳೆ ಮುಳುಗತ್ತಿರುವುದನ್ನು ಕಂಡ ಕಾಸಿನಾಥ ತಕ್ಷಣ ನೀರಿಗೆ ದುಮುಕಿ ರಕ್ಷಿಸಿದ್ದಾರೆ.

Home add -Advt

ಕೋಟೆ ಕೆರೆಯಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸ್ ಪೇದೆ ಕಾಶಿನಾಥ ಇರ್ಗಾರ್ ಅವರ ಸಮಯೋಚಿತ ಕ್ರಮವನ್ನು ಶ್ಲಾಘಿಸಿದ ಪೊಲೀಸ್ ಕಮಿಷನರ್ ಸಿದ್ದರಾಮಪ್ಪ, ಅವರು 5000 ರೂಪಾಯಿ ನಗದು ಬಹುಮಾನವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಧೈರ್ಯಶಾಲಿ ಸಿಬ್ಬಂದಿಯನ್ನು ಮುಖ್ಯಮಂತ್ರಿ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

Related Articles

Back to top button