Kannada NewsKarnataka NewsLatest

ಕಾರ್ಮಿಕರಿಗೆ ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ವಿತರಿಸಿದ ಗಣೇಶ ಹುಕ್ಕೇರಿ

ಪ್ರಗತಿವಾಹಿನಿ ಸುದ್ದಿ,  ಚಿಕ್ಕೋಡಿ – ತಾಲೂಕಿನ ನೇಜ ಮತ್ತು ಎಕ್ಸಂಬಾ ಗ್ರಾಮದಲ್ಲಿ ಭಾನುವಾರ ಶಾಸಕ ಗಣೇಶ ಹುಕ್ಕೇರಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಿಂದ  ಗಾರ್ಮೆಂಟ್ಸ್ ಕೆಲಸಕ್ಕಾಗಿ ಬಂದಿರುವ ಕಾರ್ಮಿಕರಿಗೆ  ಗಣೇಶ ಹುಕ್ಕೇರಿ  ಒಂದು ತಿಂಗಳಿಗೆ ಸಾಕಾಗುವಷ್ಟು  ಆಹಾರ ಸಾಮಗ್ರಿಯ ಕಿಟ್ ನ್ನು ವಿತರಿಸಿದರು.

Home add -Advt

ಲಾಕ್ ಡೌನ್ ನಿಂದಾಗಿ ಕಾರ್ಮಿಕರು ಕೆಲಸವೂ ಇಲ್ಲದೆ, ತಮ್ಮ ಊರುಗಳಿಗೆ ಮರಳಲೂ ಆಗದೆ ಕಂಗೆಟ್ಟಿದ್ದಾರೆ. ತಮ್ಮ ಊರಿಗೆ ಮರಳಲು ಅನುವು ಮಾಡಿಕೊಡಬೇಕು ಎಂದು ಅವರು ವಿನಂತಿಸಿದರು.

ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಕಳಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಗಣೇಶ ಹುಕ್ಕೇರಿ ಭರವಸೆ ನೀಡಿದರು.

Related Articles

Back to top button