Kannada NewsLatest

ಕುಂದಾನಗರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹವಾ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ‘ಯುವರತ್ನ’ ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಕುಂದಾನಗರಿ ಬೆಳಗಾವಿಗೆ ಆಗಮಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗಿತಿಸಿದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ ‘ಯುವರತ್ನ’ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದ್ದು, ಸಿನಿಮಾ ಪ್ರಚಾರದ ಅಂಗವಾಗಿ ಚಿತ್ರತಂಡ ‘ಯುವ ಸಂಭ್ರಮ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಉತ್ತರ ಕರ್ನಾಟಕ ಭಾಗಗಳಿಗೆ ಭೇಟಿ ನೀಡುತ್ತಿದೆ. ಈ ಭೇಟಿಯ ಭಾಗವಾಗಿ ಇಂದು ನಟ ಪುನೀತ್ ರಾಜಕುಮಾರ್, ಡಾಲಿ ಧನಂಜಯ್, ರವಿಶಂಕರ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಬೆಳಗಾವಿಯ ಐನಾಕ್ಸ್ ಗೆ ಭೇಟಿ ನೀಡಿದ್ದಾರೆ.

ಕುಂದಾನಗರಿಗೆ ಆಗಮಿಸಿದ ಪವರ್ ಸ್ಟಾರ್ ಅವರನ್ನು ಡೊಳ್ಳು ಬಾರಿಸಿ, ಹೂಮಳೆ ಸುರಿಸಿ, ಕನ್ನಡ ಬಾವುಟ ಹಿಡಿದು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ತಮ್ಮ ನೆಚ್ಚಿನ ನಟನನ್ನು ನೋಡಲು ಸಾಗೋಪಾದಿಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಐನಾಕ್ಸ್ ಬಳಿ ಕೆಲ ಕಾಲ ನೂಕು ನುಗ್ಗಲು ಉಂಟಾದ ಘಟನೆ ಕೂಡ ನಡೆದಿದೆ. ಈ ವೇಳೆ ಪುನೀತ್ ಯುವರತ್ನ ಚಿತ್ರದ ಡೈಲಾಗ್ ಹೇಳಿ ಅಭಿಮಾನಿಗಳನ್ನು ರಂಜಿಸಿದರು.

Related Articles

Back to top button