
ಪ್ರಗತಿವಾಹಿನಿ ಸುದ್ದಿ: ಪಂಜಾಬ್ನ ಸಿರ್ಹಿಂದ್ನ ಮಾಧೋಪುರ ಎಂಬ ಪ್ರದೇಶದಲ್ಲಿ ಗೂಡ್ಸ್ ರೈಲುಗಳ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಲೋಕೋ ಪೈಲಟ್ಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಈ ಅವಘಡದಲ್ಲಿ ಗೂಡ್ಸ್ ರೈಲಿನ ಇಂಜಿನ್ ಪಲ್ಟಿಯಾಗಿದ್ದು, ಪ್ಯಾಸೆಂಜರ್ ರೈಲು ಕೂಡ ಅದರಲ್ಲಿ ಸಿಲುಕಿಕೊಂಡಿದೆ. ಅಪಘಾತದಲ್ಲಿ ಇಬ್ಬರು ಲೋಕೋ ಪೈಲಟ್ಗಳು ಗಾಯಗೊಂಡಿದ್ದಾರೆ. ಅವರನ್ನು ಉತ್ತರಪ್ರದೇಶದ ಸಹರಾನ್ಪುರದ ವಿಕಾಸ್ ಕುಮಾರ್ (37) ಮತ್ತು ಹಿಮಾಂಶು ಕುಮಾರ್ (31) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಸ್ಥಳೀಯ ಶ್ರೀ ಫತ್ತೇಘರ್ ಸಾಹಿಬ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಅಪಘಾತ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದು, ಸರಕು ಸಾಗಣೆ ರೈಲು ಹಳಿ ಮೇಲೆ ನಿಂತಿದ್ದಾಗ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂದಿದೆ? ಅಲ್ಲದೆ, ಸರಕು ಸಾಗಣೆ ರೈಲು ಅದೇ ಮಾರ್ಗದಲ್ಲಿ ಬರಲು ಸಿಗ್ನಲ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
 
					 
				 
					 
					 
					 
					
 
					 
					 
					


