Latest

ಜಾಗತಿಕ ಖ್ಯಾತಿಯ ಟಿಕ್ ಟಾಕರ್ ಖಾಬಿ ಲೇಮ್ ಪ್ರತಿ ಪೋಸ್ಟ್ ನ ಗಳಿಕೆ ಅಷ್ಟಿಷ್ಟಲ್ಲ!

ಪ್ರಗತಿವಾಹಿನಿ ಸುದ್ದಿ, ಡಕಾರ್: ಟಿಕ್‌ಟಾಕ್‌ನಲ್ಲಿ ಜಗತ್ತಿನಾದ್ಯಂತ ಅತಿ ಹೆಚ್ಚು ಫಾಲೋವರ್ ಗಳನ್ನುಹೊಂದಿರುವ ಸೆನೆಗಲ್ ನ ಖಾಬಿ ಲೇಮ್ ಪ್ರತಿ ಪೋಸ್ಟ್ ಗೆ ಗಳಿಸುವ ಹಣ ಅಷ್ಟಿಷ್ಟಲ್ಲ.

ಪ್ರತಿ ಪೋಸ್ಟ್‌ಗೆ ಅವರು ಗಳಿಸುವ ಆದಾಯ 750,000 ಡಾಲರ್ ಗಳು, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 6 ಕೋಟಿ ರೂ.

Home add -Advt

ಈ ವಿಷಯವನ್ನು ಸ್ವತಃ ಖಾಬಿ ಲೇಮ್ ಬಹಿರಂಗಪಡಿಸಿದ್ದಾರೆ. 22 ವರ್ಷ ವಯಸ್ಸಿನ ಲೇಮ್ ಈ ವರ್ಷ 10 ಮಿಲಿಯನ್ ಡಾಲರ್ ಗಳಿಸುವ ಗುರಿ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ.

ಸಾಂಕ್ರಾಮಿಕ ರೋಗದಿಂದಾಗಿ ಫ್ಯಾಕ್ಟರಿ ಯಂತ್ರ ಕೆಲಸಗಾರನಾಗಿದ್ದ ಖಾಬಿ ಲೇಮ್ ಕೆಲಸ ಕಳೆದುಕೊಂಡ ನಂತರ  2020 ರಲ್ಲಿ ಟಿಕ್‌ಟಾಕ್‌ಗೆ ಸೇರಿದ್ದರು. ಇದು ಅವರ ಅದೃಷ್ಟವನ್ನೇ ಖುಲಾಯಿಸಿತು.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನಟಿ

Related Articles

Back to top button