ಪತ್ರಿಕಾಗೋಷ್ಠಿಯಲ್ಲಿ ಡಿಸಿ ಎಸ್.ಎಸ್.ನಕುಲ್ ಮಾಹಿತಿ
Video Player
00:00
00:00
ಪ್ರಗತಿವಾಹಿನಿ ಸುದ್ದಿ, ಕಾರವಾರ
ಕೂರ್ಮಗಡ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ದೋಣಿ ಅರಬ್ಬಿಸಮುದ್ರದಲ್ಲಿ ಮುಳುಗಿದ ಘಟನೆಯಲ್ಲಿ ಸತ್ತವರ ಸಂಖ್ಯೆ 14ಕ್ಕೇರಿದೆ.
ದೋಣಿಯಲ್ಲಿದ್ದ ಒಟ್ಟು 35ಜನರ ಪೈಕಿ 19ಜನರನ್ನು ರಕ್ಷಿಸಲಾಗಿದೆ. ಈವರೆಗೆ 14 ಮೃತದೇಹಗಳು ಸಿಕ್ಕಿದ್ದು ಮರಣೋತ್ತರ ಪರೀಕ್ಷೆ ಮಾಡಿ ವಾರಸುದಾರರಿಗೆ ನೀಡಲಾಗಿದೆ. ಇನ್ನು 2ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Video Player
00:00
00:00
ದೋಣಿ ಅವಘಡ ಕುರಿತು ಸರ್ಕಾರಕ್ಕೆ ಜಿಲ್ಲಾಡಳಿತದಿಂದ ವಿಶೇಷ ವರದಿ ಸಲ್ಲಿಸಲಾಗಿದೆ. ಅವಘಡಕ್ಕೆ ಕಾರಣವಾದ ದೋಣಿಯ ಚಾಲಕ ಮತ್ತು ಮಾಲಿಕರಾದ ದಯಾನಂದ ಜಾದವ್ ಮತ್ತು ರಂಗನಾಥ್ ಜೋಪಡೆ ಇಬ್ಬರನ್ನು ಬಂಧಿಸಲಾಗಿದೆ. ಘಟನೆ ಕಾರಣ ಕುರಿತು ತನಿಖೆ ನಡೆಯುತ್ತಿದೆ. ಅದರ ಆಧಾರದ ಮೇಲೆ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ಅವರು ಹೇಳಿದರು.

ಘಟನೆ ಸಂದರ್ಭದಲ್ಲಿ ಸಾರ್ವಜನಿಕರು, ಮೀನುಗಾರರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಿದ್ದಾರೆ. ನೌಕಾಸೇನೆ, ತಟರಕ್ಷಣಾ ಪಡೆ ಹಾಗೂ ಕರಾವಳಿ ಕಾವಲು ಪೊಲೀಸರು ಹಗಲು ರಾತ್ರಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಪ ಹೊಸೂರಿನ ಒಂದೇ ಕುಟುಂಬದ 13ಜನರು ಈ ದೋಣಿಯಲ್ಲಿದ್ದರು. ಈ ಪೈಕಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಳು ಮೃತ ದೇಹಗಳು ಸಿಕ್ಕಿವೆ. ಇನ್ನೆರಡು ಸಿಗಬೇಕಿದೆ. ಇದು ಅತ್ಯಂತ ದುರದೃಷ್ಟದ ಸಂಗತಿ. ಇಂದು ಬೆಳಗಿನಿಂದ ಪೊಲೀಸರೊಂದಿಗೆ ಟ್ಯಾಗೋರ್ ಕಡಲು ತೀರ ಅಭಿವೃದ್ಧಿ ಸಮಿತಿಯ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್ ನ ಐದು ತಂಡಗಳು ಶೋಧ ಕಾರ್ಯ ನಡೆಸುತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ್ ಪಾಟೀಲ್, ತಟರಕ್ಷಣಾ ಪಡೆ ಕಮಾಂಡರ್ ಅವನೀಂದರ್ ನಂದಾ, ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಪ್ರಮೋದ್ ರಾವ್ ಇದ್ದರು.