Belagavi NewsBelgaum NewsKannada NewsKarnataka NewsPolitics

*ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಣಿ ಚೆನ್ನಮ್ಮ ಕೀರು ಮೃಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌

ಇಂದು ಬೆಳಗಾವಿ ಹೊರವಲಯದ ಭೂತರಾಮನಹಟ್ಟಿ ಗ್ರಾಮದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಕೀರು ಮೃಗಾಲಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ  ಮೇಲಿರುವ ಅವರ ಬದ್ಧತೆಯನ್ನು ತೋರಿಸಿದರು. 

ಇಂದು ಭೇಟಿ ನೀಡಿದ ಸಮಯದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು,  ಮೃಗಾಲಯದ ಸೌಕರ್ಯಗಳನ್ನು ವೀಕ್ಷಿಸಿದರು, ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.‌ ಮತ್ತು ಅಲ್ಲಿ ನಡೆಯುತ್ತಿರುವ ವಿವಿಧ ಸಂರಕ್ಷಣೆ ಪ್ರಯತ್ನಗಳನ್ನು ಗಮನಿಸಿದರು. ಇನ್ನೂ ಮೃಗಾಲಯದ ಅಧಿಕಾರಿಗಳು ಸಂಸದರಿಗೆ ಪ್ರೇಕ್ಷಕರಿಗೆ ಇರುವ ಸೌಲತ್ತುಗಳ ಬಗ್ಗೆ ತಿಳಿಸಿದರು.

ಮೃಗಾಲಯದ ಅಭಿವೃದ್ಧಿಗಾಗಿ ಸಂಭಾವ್ಯ ಯೋಜನೆಗಳ ಕುರಿತು ಚರ್ಚೆಯನ್ನು ಮಾಡಿದರು.ಮೃಗಾಲಯವು ಪ್ರಾಣಿಗಳ ವಾಸಸ್ಥಾನವನ್ನು ಸಂರಕ್ಷಿಸುವಲ್ಲಿ ಹಾಗೂ ಜೈವಿಕ ವೈವಿಧ್ಯತೆಯನ್ನು ಉತ್ತೇಜಿಸುವಲ್ಲಿ ಮಾಡುತ್ತಿರುವ ಪ್ರಯತ್ನಗಳಿಗೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌

Home add -Advt

Related Articles

Back to top button