Latest

ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022 ಗೆದ್ದ ಸಿನಿ ಶೆಟ್ಟಿ ಬಗ್ಗೆ ಗೊತ್ತಿಲ್ಲದ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉಡುಪಿಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022ರ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಮುಂಬೈನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದ ಸಿನಿ ಶೆಟ್ಟಿಗೆ ಕಳೆದ ವರ್ಷದ ಮಿಸ್ ಇಂಡಿಯಾ ವಿಜೇತೆ ಮಾನಸಿ ವಾರಣಾಸಿ ಕ್ರೌನಿಂಗ್ ಮಾಡಿದರು.

ತಮಗೆ ಮಿಸ್ ಇಡಿಯಾ ಪಟ್ಟ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸಿನಿ ಶೆಟ್ಟಿ, ಕರ್ನಾಟಕ ಹೆಮ್ಮೆ ಪಡುವಂತದ್ದನ್ನು ನಾನು ಮಾಡಿದ್ದೇನೆ ಎಂಬ ನಂಬಿಕೆಯಿದೆ. ಎಲ್ಲರ ಆಶಿರ್ವಾದ ನನ್ನ ಮೇಲಿರಲಿ ಎಂದು ಹೇಳಿದ್ದಾರೆ.

Home add -Advt

ಉಡುಪಿಯ ಇನ್ನಂಜೆ ಮೂಲದವರಾಗಿದ್ದರೂ ಸಿನಿ ಶೆಟ್ಟಿ ಬೆಳೆದಿದ್ದು ಮುಂಬೈನಲ್ಲಿ ಹೋಟೆಲ್ ಉದ್ಯಮಿ ಸದಾನಂದ ಶೆಟ್ಟಿ ಹಾಗೂ ಹೇಮಾ ಶೆಟ್ಟಿ ದಂಪತಿಯ ಪುತ್ರಿ.

ಭರತನಾಟ್ಯ, ಮಾಡೆಲಿಂಗ್ ಕ್ಷೇತ್ರಗಳಲ್ಲಿಯೂ ಪರಣಿತಿ ಪಡೆದಿರುವ ಸಿನಿ ಶೆಟ್ಟಿ ಅಕೌಂಟಿಂಗ್ ಹಾಗೂ ಫೈನಾನ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಹಲವು ಪ್ರತಿಷ್ಠತ ಕಂಪನಿ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೇ ವರ್ಷ ಮಿಸ್ ಇಂಡಿಯಾ ಕರ್ನಾಟಕ ಆಗಿ ಆಯ್ಕೆಯಾಗಿದ್ದ ಅವರು ಇದೀಗ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022 ಆಗಿ ಮಿಂಚಿದ್ದಾರೆ.

 

Related Articles

Back to top button