Latest

ಬಿಸಿಲ ಝಳ: ಆರೋಗ್ಯ ರಕ್ಷಣೆಗೆ ಸರ್ಕಾರದಿಂದ ಹೊಸ ಗೈಡ್ ಲೈನ್ ಬಿಡುಗಡೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಏಪ್ರಿಲ್ ಅಂತ್ಯದಿಂದ ಆರಂಭವಾಗಬೇಕಿದ್ದ ಬಿರು ಬಿಸಿಲು ಈ ಬಾರಿ ಮೊದಲೇ ಆರಂಭವಾಗಿದ್ದು, ಮಾರ್ಚ್ ಆರಂಭದಲ್ಲೇ ಬಿಸಿಲ ಝಳಕ್ಕೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಲವರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ.

ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡಿಗಡೆ ಮಾಡಿದೆ. ಉಷ್ಣಾಂಶ ಹೆಚ್ಚಳದಿಂದಾಗಿ ಬರುವ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣ ಹಾಗೂ ನಿರ್ವಹಣೆ ಮಾಡಲು ಬಿಬಿಎಂಪಿ ಹಾಗೂ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚಿಸಿದೆ.

ಬಾಯಾರಿಕೆ ಇರಲಿ ಇಲ್ಲದಿರಲಿ ಪದೇ ಪದೇ ನೀರು ಸೇವಿಸಬೇಕು
ಪ್ರಯಾಣ ಸಮಯದಲ್ಲಿ ನೀರು ಕೊಂಡೊಯ್ಯುವ ಅಗತ್ಯವಿದೆ
ಮನೆ ಕಿಟಕಿಗಳನ್ನು ತೆರೆದಿಡಬೇಕು
ಅಡಿಗೆ ಮನೆಯಲ್ಲಿ ವೆಂಟಿಲೇಷನ್ ಖಚಿತಪಡಿಸಿಕೊಳ್ಳಬೇಕು
ಹೊರಗಡೆ ಕೆಲಸ ಮಾಡುವವರು ಪ್ರತಿ 20 ನಿಮಿಷಗಳಿಗೊಮ್ಮೆ ನೀರು ಸೇವಿಸಿ
ಕಲ್ಲಂಗಡಿ, ಕರಬೂಜ, ಸೌತೆಕಾಯಿ, ಎಳನೀರು ಹೆಚ್ಚಾಗಿ ಸೇವಿಸಿ
ನಿಂಬೆ ಷರಬತ್ತು ಸೇವನೆ
ತಿಳಿಬಣ್ಣದ, ಮೆತ್ತನೆ ಹತ್ತಿ ಬಟ್ಟೆ ಧರಿಸುವುದು ಉತ್ತಮ
ಒಳಾಂಗಣದಲ್ಲಿರುವುದು ಉತ್ತಮ. ಹೊರಾಂಗಣ ಚಟುವಟಿಕೆ ಬೆಳಿಗ್ಗೆ ಹಾಗೂ ಸಂಜೆಗೆ ಸೀಮಿತವಾಗಿರಲಿ
ಬಿಪಿ, ಹೃದ್ರೋಗ ಸಮಸ್ಯೆ ಇರುವವರು ಹೆಚ್ಚು ಜಾಗೃತರಾಗಿರಿ

ಬೇಸಿಗೆಯಲ್ಲಿ ಮಧ್ಯಾಹ್ನ 12ಗಂಟೆಯಿಂದ 3 ಗಂಟೆಯವರೆಗೆ ಬಿಸಿಲಿನಲ್ಲಿ ಓಡಾಡಡಿರುವುದು ಸೂಕ್ತ
ಗರ್ಭಿಣಿಯರು, ಮಕ್ಕಳು, ಕಾರು ಚಾಲಕರು, ಬಯಲು ಪ್ರದೇಶದಲ್ಲಿ ದುಡಿಯುವ ಕಾರ್ಮಿಕರು ಎಚ್ಚರಿಕೆ ವಹಿಸುವುದು ಅಗತ್ಯ
ಚಹಾ, ಕಾಫಿ, ಕಾರ್ಬೊನೇಟೆಡ್ ಪಾನಿಯದಿಂದ ದೂರವಿರಿ.
ಮಧ್ಯಪಾನ ಸೇವನೆ ಮಿತಿ ಇರಲಿ
ಚಪ್ಪಲಿ ಧರಿಸದೇ ಓಡಾಡುದುವುದು ಸರಿಯಲ್ಲ
ಹಳೆ ಆಹಾರ ಸೇವನೆ ಮಾಡಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Home add -Advt

Related Articles

Back to top button