
ಪ್ರಗತಿವಾಹಿನಿ ಸುದ್ದಿ; ರಾಮದುರ್ಗ : ನಿಗದಿತ ಸಮಯಕ್ಕೆ ಬಸ್ ಬರದೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುರೇಬಾನ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ರಾಮದುರ್ಗ ತಾಲೂಕಿನ ಹಿರೇತಡಸಿ, ಚಿಕ್ಕತಡಸಿ ಬೆನ್ನೂರ ಹಂಪಿಹೋಳಿ ಅಲ್ಲದೆ ಇನ್ನೂ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಕುಳಗೇರಿಯಿಂದ ಕರ್ಲಕೊಪ್ಪ, ಹಿರೆತಡಸಿ, ಚಿಕ್ಕತಡಸಿ ಮಾರ್ಗವಾಗಿ ಸುರೇಬಾನಕ್ಕೆ ಬರುವ ಬಸ್ ಮೂಲಕ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಬೇಕು. ಆದರೆ ಇಲ್ಲಿನ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್ ಬಾರದೆ ಇರುವದರಿಂದ ವಿದ್ಯಾರ್ಥಿಗಳು 7-8 ಕಿ.ಮೀ ನಡೆದುಕೊಂಡೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಇಂತದ್ದೇ ಸಮಸ್ಯೆ ಅನುಭವಿಸಿದ ವಿದ್ಯಾರ್ಥಿಗಳ ಸಹನೆ ಕಟ್ಟೆಯೊಡೆದಿದ್ದು, ಇಂದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ್ ಅವ್ಯಕ್ತಪಡಿಸಿದರು.
ಈಗಾಗಲೇ ಸಂಭಂದಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಸ್ ವ್ಯವಸ್ಥೆ ಸರಿಯಾಗಿ ಮಾಡದ ಹಾಗೂ ನಿಗದುತ ಸಮಯಕ್ಕೆ ಬಸ್ ಬಾರದ ಬಗ್ಗೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಸುರೇಬಾನ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಇತಿಹಾಸದಲ್ಲಿಯೇ ಇಂತಹ ದೃಶ್ಯ ನೋಡಿರಲಿಲ್ಲ; ಸಿದ್ದರಾಮಯ್ಯ ಆಕ್ರೋಶ
https://pragati.taskdun.com/politics/bangalore-floodsiddaramaiahpressmeetbjp-govt/
					
				
					
					
					
					
					
					
					


