Kannada NewsLatestWorld

*ಹೆಲಿಕಾಪ್ಟರ್ ಪತನ: 14 ಜನ ಸಾವು*

ಪ್ರಗತಿವಾಹಿನಿ ಸುದ್ದಿ: ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡು 14 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೌದಿ ಅರೇಬಿಯಾದ ರಾಸ್ ತನುರಾ ನಗರದಲ್ಲಿ ಈ ಅಪಘಾತ ಸಂಭವಿಸಿದೆ.  ಹೆಲಿಕಾಪ್ಟರ್ ಅಪಘಾತದಲ್ಲಿ ಸೌದಿ ಅರಾಮ್ಮೊ ತೈಲ ಕಂಪನಿ ಹೆಲಿಕಾಪ್ಟರ್ ಇದಾಗಿದೆ.

Related Articles
Home add -Advt

ಮೃತರೆಲ್ಲರೂ ಸೌದಿ ಅರೇಬಿಯಾದ ನಾಗರಿಕರು ಎಂದು ದೃಢಪಡಿಸಲಾಗಿದೆ. ಘಟನೆ ನಡೆದ ನಿಖರ ಸಮಯ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಜೊತೆಗೆ, ಮೃತರ ಕುರಿತು ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಪಟ್ಟ ಅಧಿಕಾರಿಗಳು, ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ತನಿಖೆಯನ್ನು ಆರಂಭಿಸಿದ್ದಾರೆ. 

Related Articles

Back to top button