Latest

ಲವ್ ಜಿಹಾದ್ ಆರೋಪಕ್ಕೆ ಬಿಗ್ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿಯ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯುವತಿ ತನ್ನನ್ನು ಯಾರೂ ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ, ತಾನು ಒಪ್ಪಿಗೆಯಿಂದಲೇ ವಿವಾಹವಾಗಿದ್ದಾಗಿ ತಿಳಿಸಿದ್ದಾಳೆ.

ಹುಬ್ಬಳ್ಳಿಯ ಕಮರಿಪೇಟೆ ನಿವಾಸಿ ಸ್ನೇಹಾಳನ್ನು ಇಬ್ರಾಹಿಂ ಎಂಬಾತ ಪ್ರೀತಿಸಿದ್ದ. ಗದಗದಲ್ಲಿ ಈ ಜೋಡಿ ಏ.2ರಂದು ರಿಜಿಸ್ಟ್ರಾರ್ ಮದುವೆ ಆಗಿದ್ದರು. ಯುವತಿಯನ್ನು ಬ್ರೇನ್ ವಾಶ್ ಮಾಡಿ ಮದುವೆಯಾಗಿದ್ದು, ಲವ್ ಜಿಹಾದ್ ಮಾಡಿದ್ದಾರೆ ಎಂದು ಯುವತಿ ಪೋಷಕರು ಆರೋಪಿಸಿದ್ದರು.

ಇಬ್ರಾಹಿಂ ಹಿಂದೂ ಹುಡುಗ ಎಂದು ಯುವತಿಯನ್ನು ಪರಿಚಯಿಸಿಕೊಂಡಿದ್ದಾನೆ. ಯುವತಿಯ ಸಹೋದರನಿಂದ ಇಬ್ರಾಹಿಂ ಪರಿಚಯನಾಗಿದ್ದ. ಇದೊಂದು ಲವ್ ಜಿಹಾದ್ ಪ್ರಕರಣ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಯುವತಿಯನ್ನು ನಾಳೆ ಮಧ್ಯಾಹ್ನದೊಳಗೆ ಪೊಲೀಸರು ಕರೆ ತರದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಇದೀಗ ಯುವತಿ ವಿಡಿಯೋ ಸಂದೇಶ ರವಾನಿಸಿದ್ದು, ತಾನು ಯಾವುದೇ ಒತ್ತಡಕ್ಕೆ ಒಳಗಾಗಿ ಬಂದಿಲ್ಲ. ನನ್ನ ಒಪ್ಪಿಗೆಯಿಂದಲೇ ಇದ್ದೇನೆ. ತಾನು ಇಬ್ರಾಹಿಂ ನನ್ನು ಪ್ರೀತಿಸುತ್ತಿದ್ದು, ಅವರ ಜತೆಯೇ ಇದ್ದೇನೆ. ಆದರೆ ಅವರ ಕುಟುಂಬದವರಿಗೆ ನಾನು ಅವರ ಜತೆ ಇರುವುದು ತಿಳಿದಿಲ್ಲ ಎಂದು ಹೇಳಿದ್ದಾಳೆ.

Home add -Advt

ಎಕ್ಸ್ ಇ ಹೊಸ ರೂಪಾಂತರಿ ವೈರಸ್ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವರು

Related Articles

Back to top button