Karnataka NewsLatest
*ಹಾಡಹಗಲೇ ಜ್ಯುವೆಲ್ಲರಿ ಶಾಪ್ ಗೆ ನುಗ್ಗಿ ದರೋಡೆ: ಮಾಲೀಕನ ತಲೆಗೆ ಗನ್ ಹಿಡಿದು 3 ಕೆಜಿ ಚಿನ್ನಾಭರಣ ಹೊತ್ತೊಯ್ದ ಕಳ್ಳರು*

ಪ್ರಗತಿವಾಹಿನಿ ಸುದ್ದಿ: ಹಾಡಹಗಲೇ ದರೋಡೆಕೋರರು ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿಯ ಸರಾಫ್ ಬಜಾರ್ ನಲ್ಲಿರುವ ಮಾಲಿಕ್ ಜ್ಯುವೆಲ್ಲರಿ ಅಂಗಡಿಗೆ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಬಂದ ನಾಲ್ವರ ಗ್ಯಾಂಗ್, ಏಕಾಏಕಿ ಚಿನ್ನದಂಗಡಿ ಮಾಲಿಕನ ತಲೆಗೆ ಗನ್ ಇಟ್ಟು ಹೆದರಿಸಿ, 3 ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ನಾಲ್ವರ ಗ್ಯಾಂಗ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಈ ಕೃತ್ಯವೆಸಗಿ ತೆರಳಿದೆ. ಅಂಗಡಿಗೆ ಕಳ್ಳರು ಬರುತ್ತಿರುವ ಹಾಗೂ ಅಂಗಡಿಯಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.