ನಿರ್ಭಯ ಸಮಾಜ ಕಟ್ಟೋಣ ಎಂದ ಪವರ್ ಸ್ಟಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಂದೇಶವೊಂದನ್ನು ನೀಡಿದ್ದಾರೆ.

ಬಿಎಂಟಿಸಿ ರಾಯಭಾರಿಯೂ ಆಗಿರುವ ಪುನೀತ್ ರಾಜ್ ಕುಮಾರ್, ಯುವತಿಯರನ್ನು ಚುಡಾಯಿಸುವ ಪುಂಡರಿಗೆ ತಮ್ಮ ತಪ್ಪಿನ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ನಿಮ್ಮ ಜೊತೆಗೆ ನಾವು ಇದ್ದೇವೆ ಎಂಬ ಒಗ್ಗಟ್ಟು ಪ್ರದರ್ಶನದ ಬಗ್ಗೆ ಸಮಾಜಕ್ಕೆ ಸಂದೇಶ ನೀಡಿದ್ದಾರೆ.

ಕೆಲವೊಮ್ಮೆ, ಸಮಾಜವನ್ನು ಉತ್ತಮಗೊಳಿಸಲು ಬೇಕಾಗಿರುವುದು ಒಗ್ಗಟ್ಟು..!! ಈ ಮಹಿಳಾ ದಿನದಂದು ನಮ್ಮಲ್ಲಿರುವ ಏಕತೆಯನ್ನು ಕಂಡು ಕೊಳ್ಳೋಣ ಹಾಗೂ ಮಹಿಳೆಯರಿಗಾಗಿ ಎಲ್ಲೆಡೆ ಒಟ್ಟಾಗಿ ನಿಲ್ಲೋಣ. ಎಲ್ಲರೂ ಸೇರಿ ನಿರ್ಭಯ ಸಮಾಜ ಕಟ್ಟೋಣ ಎಂದು ಕರೆ ನೀಡಿದ್ದಾರೆ

 

Home add -Advt

Related Articles

Back to top button