Latest

ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ; ಐವರ ದುರ್ಮರಣ, 49 ಜನರಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ; ಜೈಪುರ: ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೊಟಗೊಂಡ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 49 ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.

ಜೋಢ್ ಪುರದ ಶೇರ್ಘಡ ಉಪವಿಭಾಗದ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದ್ದು, ಸ್ಫೋಟದ ಭೀಕರತೆಗೆ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಮದುವೆಗೆ ಆಗಮಿಸಿದ್ದ ಐದು ಜನರು ಸಾವನ್ನಪ್ಪಿದ್ದು, 49 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಾಳುಗಳಲ್ಲಿ ಬಹುತೇಕರಿಗೆ ಶೇ.80ರಷ್ಟು ಸುಟ್ಟಗಾಯಗಳಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಮದುಮಗ ಸುರೇಂದ್ರ ಸಿಂಗ್ ಮನೆಗೆ ಅತಿಥಿಗಳು ಆಗಮಿಸಿದ್ದರು. ಊಟೋಪಚಾರದ ಸಿದ್ಧತೆ ನಡೆದಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾರೆ.

 

Home add -Advt

ಬುರ್ಖಾ ಧರಿಸಿ ಐಟಂ ಸಾಂಗ್ ಗೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು; ನಾಲ್ವರು ಎಂಜಿನಿಯರಿಂಗ್ ಸ್ಟುಡೆಂಟ್ಸ್ ಸಸ್ಪೆಂಡ್

https://pragati.taskdun.com/mangalore-college4-studentssuspendeditem-songburkha/

Related Articles

Back to top button