GIT add 2024-1
Beereshwara 33

ಅಭಿವೃದ್ಧಿಗಾಗಿ ಪ್ರಿಯಾಂಕಾ ಜಾರಕಿಹೊಳಿ ಗೆಲ್ಲಿಸಿ: ಪ್ರಕಾಶ ಹುಕ್ಕೇರಿ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಚಿಕ್ಕೊಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಗಟ್ಟಿಯಾಗಿ ನೆಲ ಊರಿದೆ ಎಂದು  ವಿಧಾನಪರಿಷತ್ ಸದಸ್ಯ, ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.

ಅವರು ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ‌ನಣದಿ ಗ್ರಾಮದಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೋಳಿ ‌ಪ್ರಚಾರರ್ಥವಾಗಿ  ಕಾಂಗ್ರೆಸ್ ಕಾರ್ಯಕರ್ತರ ‌ಸಭೆಯಲ್ಲಿ ಮಾತನಾಡಿ, ನಣದಿ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಆಗಿವೆ. ಮುಂದೆ ಸಹ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು. ಕಾಂಗ್ರೆಸ್ ಪಕ್ಷದ ಪರವಾಗಿ ನಿಷ್ಠಾವಂತನಾಗಿ ದುಡಿಯುತ್ತಿದ್ದೇನೆ. ಅಪಪ್ರಚಾರದ ಬಗ್ಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಾಮಾಣಿಕವಾಗಿ ದುಡಿಯೋಣ.  ನಮ್ಮ ಲೋಕಸಭಾ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೋಳಿ ಗೆಲವು‌ ನಿಶ್ಚಿತ ಎಂದರು.

Emergency Service

ಬಳಿಕ ಮಾಜಿ ತಾ‌.ಪಂ ಸದಸ್ಯ ಮಲ್ಲು ಹವಾಲ್ದಾರ ಮಾತನಾಡಿ, ಕಾಂಗ್ರೆಸ್ ಪಕ್ಷ ಒಡೆಯುವ ಪಕ್ಷವಲ್ಲ. ಆದ್ರೆ ಬಿಜೆಪಿ ಸುಳ್ಳು ಭರವಸೆಯನ್ನು ನೀಡುವ ಪಕ್ಷ. ರಾಮಮಂದಿರದ ಹೆಸರು ಹೇಳಿಕೊಂಡು‌ ಬಿಜೆಪಿ ಪಕ್ಷವು ರಾಜಕೀಯ ಮಾಡುತ್ತಿದೆ. ಆದ್ರೆ ನಾವೂ ಹನುಮಾನ್ ಭಕ್ತರೆ. ಆದ್ರೆ ರಾಜಕಾರಣ ಮಾಡುವವರಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಒಳ್ಳೆಯ ಕೆಲಸಗಳು ಆಗುತ್ತಿವೆ. ಹೀಗಾಗಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಗೆಲ್ಲಿಸಿಕೊಂಡು ಬರೋಣ ಎಂದರು.

ಈ ಸಂದರ್ಭದಲ್ಲಿ ವಿಜಯಸಿಂಹ ದೇಸಾಯಿ, ನಾಯರ್ ನಿಂಬಾಳಕರ ಸರಕಾರ, ಮಂಗಲ ಹವಾಲ್ದಾರ್, ಸೊನಾಲಿ ಕೋಕಣೆ, ರಾಮಚಂದ್ರ ಮಡಿವಾಳೆ, ಸಂಜು ಕೇರಾಯಿ, ಬಂಡು ನಾಯಿಕವಾಡಿ, ಮಾರುತಿ ಹವಾಲ್ದಾರ್, ರಾಮಕೃಷ್ಣ ಚಿನಗೆ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು  ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2